ಬೋಟು ಮುಳುಗಿ ಮೀನುಗಾರ ನೀರುಪಾಲು

ಬೋಟು ಮುಳುಗಿ ಮೀನುಗಾರ ನೀರುಪಾಲು

ಮಂಗಳೂರು: ಮೀನುಗಾರಿಕಾ ಬೋಟೊಂದು ಮುಳುಗಿದ ಪರಿಣಾಮ ಮೀನುಗಾರರೋರ್ವರು ನಾಪತ್ತೆಯಾದ ಘಟನೆ ಉಳ್ಳಾಲ ಕಡಲ ತೀರದಲ್ಲಿ ಸಂಭವಿಸಿದೆ.

ಮೃತರನ್ನು ಕುಮಟಾ ತಾಲೂಕಿನ ಬರ್ಗಿ ಗ್ರಾಮದ ನಿವಾಸಿ ಹಮೀದ್ ಎಂದು ಗುರುತಿಸಲಾಗಿದೆ.

ಮಂಗಳೂರಿನ ಕಸಬಾ ಬೆಂಗ್ರೆಯ ಅಬೂಬಕ್ಕರ್ ಎಂಬವರಿಗೆ ಸೇರಿದ ಬೋಟಿನಲ್ಲಿ ಆರು ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ವಾಪಾಸ್ ಆಗಮಿಸುತ್ತಿದ್ದ ವೇಳೆ ಅಳಿವೆ ಬಾಗಿಲಿನಲ್ಲಿ ದೋಣಿ ಮುಳುಗಿ ಅವಘಡ ಸಂಭವಿಸಿದೆ.

ದೋಣಿಯಲ್ಲಿದ್ದ ಇತರ ಮೀನುಗಾರರು ಈಜಿ ದಡ ಸೇರಿದ್ದು ನಾಪತ್ತೆಯಾದ ಹಮೀದ್ ಅವರ ಶೋಧ ಕಾರ್ಯ ನಡೆದಿದೆ

Leave a Reply