ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸಾಧನಾ ಶೀಲರಿಗೆ ಸನ್ಮಾನ ಕಾರ್ಯಕ್ರಮ ಪುರಭವನದಲ್ಲಿ ಜರುಗಿತು. ಮಾಜಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಪ್ರದಾನ ಮಾಡಿದರು.

image001billava-brahmashree-award-sorake-20160718 image002billava-brahmashree-award-sorake-20160718

ಬಳಿಕ ಮಾತನಾಡಿದ ಸೊರಕೆಯವರು ಬಿಲ್ಲವ ಸಮಾಜಕ್ಕೆ ನಾರಾ ಯಣ ಗುರುಗಳು ದೊಡ್ಡ ಶಕ್ತಿ ಇದ್ದಂತೆ. ಬಿಲ್ಲವರು ಅಸ್ಪೃಶ್ಯರಾಗಿದ್ದ ಕಾಲದಲ್ಲಿ ದೇವಸ್ಥಾನವನ್ನು ಕಟ್ಟುವ ಮೂಲಕ ಅವರನ್ನು ಒಗ್ಗೂಡಿಸುವ ಕಾರ್ಯ ಮಾಡಿದರು. ನಾರಾಯಣ ಗುರುಗಳ ವಿದ್ಯಾರ್ಜ ನೆಯ ಮೂಲಕ ಸ್ವತಂತ್ರರಾಗಿ ಎಂಬ ಮಾತನ್ನು ಅನುಷ್ಠಾನಕ್ಕೆ ತರುವ ಕಾರ್ಯ ವನ್ನು ನಾರಾಯಣ ಗುರು ಯುವವೇದಿಕೆ ಮಾಡಿದೆ.ವಿದ್ಯಾರ್ಥಿಗಳು ನಮ್ಮ ಭವಿಷ್ಯ. ಅದನ್ನು ರೂಪಿಸಲು ಪೂರಕವಾದ ಕೆಲಸ ವನ್ನು ಈ ವೇದಿಕೆ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂ ಣಿಯಲ್ಲಿದೆ. ಆದರೆ ಇಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವವರ ಸಂಖ್ಯೆ ಕಡಿಮೆ. ಈ ಸಂಖ್ಯೆ ಹೆಚ್ಚಾಗುವತ್ತ ನಾವು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ‘ಬ್ರಹ್ಮಶ್ರೀ’ ವಿಶೇಷ ಸಂಚಿಕೆಯ ಬಿಡುಗಡೆ ಮಾಡಲಾ ಯಿತು. ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಇನ್‌ಸ್ಪೆಕ್ಟರ್ ಶಾಂತರಾಮ ಕುಂ ದರ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರ ಗೋಡು ಜಿಲ್ಲೆಯ 322 ವಿದ್ಯಾರ್ಥಿಗಳಿಗೆ ₹3.25 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕ್ರೀಡೆ ಮತ್ತು ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿಗಳಾದ ಸುಪ್ರಿತಾ ಪೂಜಾರಿ(ಕ್ರೀಡೆ), ಕ್ಷಿಪ್ರಜ್ ಯು. ಪೂಜಾರಿ (ಶಿಕ್ಷಣ), ಗಗನ್ ಪೂಜಾರಿ (ಶಿಕ್ಷಣ ಮತ್ತು ಕರಾಟೆ), ಸಲೋನಿ (ಕರಾಟೆ), ವರ್ಷಾ (ಶಿಕ್ಷಣ) ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 622 ಅಂಕ (ಶೇ 99.5) ಗಳಿಸಿದ ರಕ್ಷಾ ಡಿ. ಅಂ ಚನ್ ಅವರಿಗೆ ಬ್ರಹ್ಮಶ್ರೀ ಬಂಗಾರದ ಪದಕ ನೀಡಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವರ್ಷಾ ಅವರು ಪದಕ ಪ್ರದಾನ ಮಾಡಿದರು.

image003billava-brahmashree-award-sorake-20160718 image004billava-brahmashree-award-sorake-20160718

ರಾಷ್ಟ್ರೀಯ ಬಿಲ್ಲವ ಮಹಾ ಮಂಡ ಲದ ವಕ್ತಾರ ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ಕೃಷ್ಣ ಜೆ. ಪಾಲೆ ಮಾರ್, ಅಂಚನ್‌ ಗಾರ್ಮೆಂಟ್ಸ್‌ನ ಮಾಲೀಕ ಪ್ರಕಾಶ್ ಅಂಚನ್, ಡಾ. ಅಭಿ ನಯ್, ಶಿರಡಿ ಬಾಬಾ ರಿಯಲ್‌ ಎಸ್ಟೇ ಟ್‌ನ ರತೀಂದ್ರನಾಥ ಎಚ್, ನಾರಾ ಯಣ ಗುರು ವೇದಿಕೆಯ ಅಧ್ಯಕ್ಷ ಮೋಹನ್‌ ರಾಜ್, ತಿಲೋತ್ತಮ ಗಂಗಾ ಧರ ಪೂಜಾರಿ, ದೇವದಾಸ್ ಆಯರ್‌ ಮಾರ್ ಮತ್ತಿತರರು ಇದ್ದರು.

Leave a Reply