ಬ್ರಹ್ಮಾವರ: ಅಪರಿಚಿತನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸರಕಳ್ಳತನ

ಬ್ರಹ್ಮಾವರ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಎರಡು ಚಿನ್ನದ ಸರವನ್ನು ಅಪರಿಚಿತನೊಬ್ಬ ಅಪಹರಿಸಿರುವ ಘಟನೆ ನ.17ರಂದು ನಡೆದಿದೆ.

ಮುಂಬಯಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೇರಳದ ಕೋಝಿಕ್ಕೋಡ್‌ನ‌ ಗಿರಿಜಾ ರಾಜನ್‌ (53) ಎಂಬವರು ತಮ್ಮ ಸಂಬಂಧಿಕರೊಂದಿಗೆ ಮಂಗಳೂರಿನಿಂದ ಬೈಂದೂರಿಗೆ ಪ್ರಯಾಣಿಸುತ್ತಿದ್ದರು. ಬಾಕೂìರು ರೈಲು ನಿಲ್ದಾಣದಲ್ಲಿ ಸುಮಾರು 25ರಿಂದ 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಗಿರಿಧಿಜಾಧಿರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಎಳೆದು ಪರಾರಿಯಾದ್ದ. ಇದರ ಮೌಲ್ಯ ಸುಮಾರು 1,40,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply