ಬ್ರಹ್ಮಾವರ: ಬೈಕ್ ಟ್ಯಾಂಕರ್ ಅಫಘಾತ: ಬೈಕ್ ಸವಾರ ಸಾವು

ಬ್ರಹ್ಮಾವರ: ಬೈಕ್ ಟ್ಯಾಂಕರ್ ನಡುವೆ ನಡೆದ ಅಫಘಾತದಲ್ಲಿ ಇಪ್ಪತ್ಮೂರು ವರ್ಷದ ಯುವನೋರ್ವ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಹೇರೂರು ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ತ್ರಾಸಿ ನಿವಾಸಿ ಸದಾನಂದ ತ್ರಾಸಿ ಎಂದು ಗುರುತಿಸಲಾಗಿದೆ.
ಮೃತರು ಮಣಿಪಾಲದಿಂದ ತ್ರಾಸಿ ಕಡೆಗೆ ತೆರಳುತ್ತಿದ್ದು, ಉಡುಪಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿಯೊಂದು ಏಕಮುಖ ರಸ್ತೆಯಲ್ಲಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಸದಾನಂದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಸಾವನಪ್ಪಿದ್ದಾರೆ ಎನ್ನಲಾಗಿದೆ.

Leave a Reply