ಬ್ರಹ್ಮಾವರ: ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಬ್ರಹ್ಮಾವರ: ನಾಪತ್ತೆಯಾಗಿದ್ದ ಹದಿನಾಲ್ಕು ವರ್ಷದ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಜಾಲು ಸಮೀಪದ ಬ್ರಹ್ಮಾವರದಲ್ಲಿ ಭಾನುವಾರ ವರಿದಿಯಾಗಿದೆ.

ಮೃತ ಬಾಲಕನನ್ನು ಕುಂಜಾಲು ನಿವಾಸಿಗಳಾದ ವಿಠಲ ಹಾಗೂ ಪ್ರೇಮಾ ಆಚಾರ್ಯ ಅವರ ಎಕೈಕ ಪುತ್ರ ಪ್ರಜ್ವಲ್ ಆಚಾರ್ಯ ಎಂದು ಗುರುತಿಸಲಾಗಿದೆ. ಮೃತ ಬಾಲಕ ಕುಂಜಾಲು ವಿಕೆಆರ್ ಆಚಾರ್ಯ ಮೆಮೋರಿಯಲ್ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥೀಯಾಗಿದ್ದ.

ಮಾಹಿತಿಗಳ ಪ್ರಕಾರ ಮೃತ ವಿದ್ಯಾರ್ಥಿ  ಕಳೆದ 11 ದಿನಗಳಿಂದ ಶಾಲೆಗೆ ಹೋಗುವುದಾಗಿ ಮನೆಯವರಲ್ಲಿ ಹೇಳಿ, ಬಳಿಕ ಶಾಲೆಗೆ ಹೋಗುತ್ತಿರಲಿಲ್ಲ ಬದಲಾಗಿ ಬೇರೆಲ್ಲೊ ಹೋಗುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥೀ ಶಾಲೆಗೆ ಬರದೆ ಇರುವುದನ್ನು ಗಮನಿಸಿದ ಅಧ್ಯಾಪಕರು ಮನೆಯವರ ಬಳಿಯವರಲ್ಲಿ ಮಾಹಿತಿ ನೀಡಿದ್ದು ಈ ಕುರಿತು ಮನೆಯವರು ಪ್ರಜ್ವಲ್ ಬಳಿ ವಿಚಾರಣೆ ಮಾಡಿದ್ದಾರೆ ಆಗಲೂ ಕೂಡ ಸರಿಯಾಗಿ ಉತ್ತರ ನೀಡಿಲ್ಲ. ಶನಿವಾರ ಶಾಲೆ ಸಮವಸ್ತ್ರ ಧರಿಸಿ ಶಾಲೆಗೆ ತೆರಳಿದ್ದು, ಮರಳಿ ಮನೆಗೆ ಬಂದಿರಲಿಲ್ಲ ಇದರಿಂದ ಗಾಬರಿಗೊಂಡ ಮನೆಯವರು ಆತನ ಹುಡುಕಾಟ ನಡೆಸಿದ್ದಾರೆ. ಭಾನುವಾರ ಬೆಳಿಗ್ಗೆ ಪ್ರಜ್ವಲ್ ಶರೀರ ಕುಂಜಾಲು ಕ್ರಾಸ್ ಬಳಿಯ ಚಿಕ್ಕ ಮರದಲ್ಲ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.  ಆತ್ಮಹತ್ಯೆಗೆ ಸರಿಯಾದ ಕಾರಣ ಇದುವರೆಗೆ ತಿಳಿದು ಬಂದಿಲ್ಲ.

ಬ್ರಹ್ಮಾವರ ಪೋಲಿಸರು ಪ್ರಕರಣ ದಾಖಲಿಸಿ ತನಿಖ ನಡೆಸುತ್ತಿದ್ದಾರೆ.

Leave a Reply

Please enter your comment!
Please enter your name here