ಬ್ಲಾಕ್ ಕಾಂಗ್ರೆಸ್, ಸಾರ್ವಜನಿಕರಿಂದ ಸಚಿವ ಪ್ರಮೋದ್ ಮಧ್ವರಾಜ್‍ರಿಗೆ ಅಭಿನಂದನೆ

ಬ್ಲಾಕ್ ಕಾಂಗ್ರೆಸ್, ಸಾರ್ವಜನಿಕರಿಂದ ಸಚಿವ ಪ್ರಮೋದ್ ಮಧ್ವರಾಜ್‍ರಿಗೆ ಅಭಿನಂದನೆ

ಬ್ರಹ್ಮಾವರ : ಬ್ರಹ್ಮಾವರ ಸಿಟಿ ಸೆಂಟರ್‍ನ ಕುಂಕುಮ್ ಸಭಾಂಗಣದಲ್ಲಿ ಭಾನುವಾರ ಮೀನುಗಾರಿಕೆ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಅಭಿನಂದಿಸಲಾಯಿತು.

pramod-madhwaraj-felicitation-brahmavar

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯುತ್ತೇನೆ. ಎಲ್ಲಾ ಜಾತಿ, ಧರ್ಮ, ರಾಜಕೀಯ ಪಕ್ಷದವರಿಂದ ನಾನು ಗೆಲುವು ಸಾಧಿಸಿದ್ದು, ಅವರೆಲ್ಲರಿಗೂ ಋಣಿಯಾಗಿದ್ದೇನೆ ಎಂದು ತಿಳಿಸಿದರು.

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾರ್ಧನ ತೋನ್ಸೆ, ಎಸ್.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಾಂಗ್ರೆಸ್ ಪ್ರಮುಖರಾದ ಗೋಪಿ ಕೆ ನಾಯ್ಕ, ಮಲ್ಲಿಕಾ ಬಿ ಪೂಜಾರಿ, ರಮೇಶ್ ಶೆಟ್ಟಿ, ನಿತ್ಯಾನಂದ ಬಿ.ಆರ್, ದಿನಕರ ಹೇರೂರು, ಉಮೇಶ ನಾಯ್ಕ ಚೇರ್ಕಾಡಿ, ಶಂಕರ್ ಕುಂದರ್, ಮಲ್ಯಾಡಿ ಶಿವರಾಮ್ ಶೆಟ್ಟಿ, ಹಿರಿಯಣ್ಣ, ಸರಸ್ವತಿ ನಾಯ್ಕ, ಎಸ್.ನಾರಾಯಣ, ಸತೀಶ್ ಅಮೀನ್, ನರಸಿಂಹ ಮೂರ್ತಿ, ಅಮೃತ್ ಶೆಣೈ, ದಿನೇಶ್ ಪುತ್ರನ್, ಸುನೀಲ್ ಬಂಗೇರ್, ದಿವಾಕರ್ ಕುಂದರ್, ರಾಘವೇಂದ್ರ, ನಿತ್ಯಾನಂದ ಕೆಮ್ಮಣ್ಣು,ಸಂಪತ್ ಕುಮಾರ್ ಜಯಲಕ್ಷ್ಮೀ ಶೆಟ್ಟಿ, ಹರೀಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.
ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಸ್ವಾಗತಿಸಿದರು. ಡಾ.ಸುನೀತಾ ಶೆಟ್ಟಿ ಮತ್ತು ರಮೇಶ್ ಕರ್ಕೆರಾ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.

Leave a Reply