ಭಜನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ : ಸಚಿವ ಪ್ರಮೋದ್ ಮಧ್ವರಾಜ್

ಭಜನೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿ : ಸಚಿವ ಪ್ರಮೋದ್ ಮಧ್ವರಾಜ್

ಧರ್ಮಸ್ಥಳ: ಪರಿಶುದ್ಧ ಮನಸ್ಸಿನಿಂದ ಶ್ರದ್ಧಾ-ಭಕ್ತಿಯೊಂದಿಗೆ ಭಜನೆ ಮಾಡಿದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ದೇವರ ನೇರ ಸಂಪರ್ಕ ಪಡೆಯಲು ಭಜನೆ ಅತ್ಯಂತ ಸರಳ ಮಾರ್ಗವಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಧರ್ಮಸ್ಥಳದಲ್ಲಿ ಭಾನುವಾರ ಅವರು ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹಿಂದೆ ಮನೆ ಮನೆಯಲ್ಲಿಯೂ ಪ್ರತಿ ದಿನ ಭಜನೆ ಮಾಡುವ ಪದ್ಧತಿ ಇತ್ತು. ಆದರೆ ಈಗ ಟಿ.ವಿ. ಹಾವಳಿಯಿಂದ ಅದು ಮಾಯವಾಗಿದೆ. ಭಜನೆ ಭಗತವಂತನ ಉತ್ತಮ ಸೇವೆಯಾಗಿದ್ದು ಇದರಿಂದ ನಮ್ಮ ಬಾಹ್ಯ ಮತ್ತು ಆತಂರಿಕ ಉನ್ನತಿ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಲ್ಯದಿಂದಲೂ ತಾನು ಧರ್ಮಸ್ಥಳದ ಅಭಿಮಾನಿ ಭಕ್ತನಾಗಿದ್ದು, ಹೆಗ್ಗಡೆಯವರ ಶಿಷ್ಯನಾಗಿದ್ದೇನೆ. ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡುತ್ತಿರುವ ಸೇವೆ ಸಾಧನೆ ವಿಶ್ವಮಾನ್ಯವಾಗಿದೆ ಎಂದರು.

bhajana-kammata-dharmasthala-00 bhajana-kammata-dharmasthala-01 bhajana-kammata-dharmasthala-02 bhajana-kammata-dharmasthala-03 bhajana-kammata-dharmasthala-04 bhajana-kammata-dharmasthala-05 bhajana-kammata-dharmasthala-06 bhajana-kammata-dharmasthala-07 bhajana-kammata-dharmasthala-08 bhajana-kammata-dharmasthala-09 bhajana-kammata-dharmasthala-10

ಬೆಂಗಳೂರಿನ ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್ ಮಾತನಾಡಿ, ದೇವರ ನಾಮ ಸ್ಮರಣೆಯಲ್ಲಿ ಅನಂತ ಶಕ್ತಿ ಇದ್ದು ಭಜನೆಯಿಂದ ಮನಸ್ಸಿಗೆ ಉತ್ತಮ ಸಂಸ್ಕಾರ ಸಿಗುತ್ತದೆ. ಆತ್ಮ ಧ್ಯಾನದೊಂದಿಗೆ ಆತ್ಮ ವಿಶ್ವಾಸ ಬೆಳೆಯುತ್ತದೆ. ಮನಸ್ಸು ಪರಿವರ್ತನೆಯಾಗಿ ದುಶ್ಚಟ ಮುಕ್ತ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಪ್ರತಿ ದಿನ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವರ ಸ್ಮರಣೆಯೊಂದಿಗೆ ನಾವು ದೇವರಲ್ಲಿ ನಮ್ಮ ನಿವೇದನೆ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತೇವೆ. ಧ್ಯಾನ ಮಾಡಿದಾಗ ನಮ್ಮ ಸಮಸ್ಯೆಗೆ ದೇವರಿಂದ ಪರಿಹಾರ ಪಡೆಯಬಹುದು ಎಂದರು.

ಭಜನಾ ಮಂದಿರಗಳು ಊರಿನ ಚಟುವಟಿಕೆಗಳ ಕೇಂದ್ರವಾಗಿ ಸಂಘಟನೆ ಬಲಪಡಿಸಬೇಕು. ಜಾತಿ-ಮತ ಬೇಧ ಹೋಗಲಾಡಿಸಿ ಸಾಮಾಜಿಕ ಸಾಮರಸ್ಯದೊಂದಿಗೆ ಶಾಂತಿ, ನೆಮ್ಮೆದಿ ನೆಲೆಸಬೇಕು ಎಂದು ಸಲಹೆ ನೀಡಿದರು.

ಮಮತಾ ರಾವ್, ವರದಿ ಸಾದರ ಪಡಿಸಿದರು. ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು, ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಮತ್ತು ಗಂಗಾಧರ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

ಒಂದು ವಾರ ನಡೆದ ಭಜನಾ ತರಬೇತಿ ಕಮ್ಮಟದಲ್ಲಿ 131 ಭಜನಾ ಮಂಡಳಿಗಳಿಂದ 220 ಮಂದಿ ಸದಸ್ಯರು ಭಾಗವಹಿಸಿದರು.

Leave a Reply

Please enter your comment!
Please enter your name here