ಭಟ್ಕಳ: ಅಂಕೋಲಾ ಬಳಿ ಕಾರು ಅಪಘಾತದಲ್ಲಿ ಇಬ್ಬರ ಮೃತ್ಯು; ಮೂವರು ಗಂಭೀರ

ಭಟ್ಕಳ: ಅಂಕೋಲ ಸಮೀಪ ಹುಬ್ಬಳ್ಳಿ ಯಲ್ಲಾಪುರ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದ ಕಾರು ಅಪಘಾತವೊಂದರಲ್ಲಿ ಭಟ್ಕಳದ ಇಬ್ಬರು ಮೃತಪಟ್ಟಿದ್ದು ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

car-truck_accident_ankola 18-09-2015 18-13-025 car-truck_accident_ankola 18-09-2015 18-13-022 car-truck_accident_ankola 18-09-2015 18-13-023 car-truck_accident_ankola 18-09-2015 18-13-024

ಮೃತರನ್ನು ಭಟ್ಕಳದ ಜಾಮಿಯಾ ಬಾದ್ ನಿವಾಸಿ ಸೈಯ್ಯದ್ ಆಹ್ಮದ್ ಸೈಯ್ಯದ್ ಮನ್ನಾ(45) ಹಾಗೂ ಸುಲ್ತಾನ್ ಸ್ಟ್ರೀಟ್ ನಿವಾಸಿ ಅಂಜುಮನ್ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿ ಫಯ್ಯಾಝ್ ಶಾಬಂದ್ರಿ(20) ಎಂದು ಗುರುತಿಸಲಾಗಿದೆ.

ಗಂಭೀರವಾಗಿ ಗಾಯಗೊಂಡವರನ್ನು ಜಾವೀದ್ ಕೋಲಾ(50, ಫಝಲುರ್ರಹ್ಮಾನ್ ಶಾಬಂದ್ರಿ(60) ಹಾಗೂ ಟೈಲ್ಸ್ ಕೆಲಸಗಾರ ರಿಂಕು ಎಂದು ಗುರುತಿಸಲಾಗಿದೆ.

ಶುಕ್ರವಾರ ಬೆಳಿಗ್ಗೆ ಭಟ್ಕಳದಿಂದ ಹುಬ್ಬಳ್ಳಿಗೆ ಮನೆಯ ಟೈಲ್ಸ್ ಖರೀದಿಗೆಂದು ಹೋಗುತ್ತಿದ್ದರು ಎನ್ನಲಾಗಿದ್ದು ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡವರನ್ನು ಉಡುಪಿ ಹಾಗೂ ಕುಂದಾಪುರ ಆಸ್ಪತ್ರೆಗೆ ಕಳುಹಿಸಲಾಗಿದೆ

Leave a Reply

Please enter your comment!
Please enter your name here