ಭಟ್ಕಳ : ಗ್ಯಾಸ್ ಟ್ಯಾಂಕರ್ ಟಯರ್ ಸ್ಪೋಟ; ಆತಂಕ ಸೃಷ್ಟಿ

ಭಟ್ಕಳ : ಗ್ಯಾಸ್ ಟ್ಯಾಂಕರ್ ಒಂದರ ಟಯರ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮುಂಬೈ ಕಡೆಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಒಂದರ ಟಯರ್ ಸ್ಪೋಟಗೊಂಡಿದ್ದು, ಇದರಿಂದ ಟಯರ್ ಬೆಂಕಿ ಹತ್ತಿಕೊಂಡಿದ್ದು ಕೆಲವೊಂದು ಕಿಡಿಗೇಡಿಗಳು ವಾಟ್ಸಾಪ್ ನಲ್ಲಿ ಗ್ಯಾಸ್ ಸೋರಿಕೆಯಾಗಿದೆ ಎಂದು ಸುಳ್ಳು ಸುದ್ದಿ ಹರಡಿದ್ದರ ಪರಿಣಾಮ ಗ್ರಾಮಸ್ಥರು ಆತಂಕಗೊಂಡು ಮನೆಯಿಂದ ಹೊರ ಒಡಿದರು.
ಸುದ್ದಿ ತಿಳಿದು ತಕ್ಷಣ ಅಗ್ನಿಶಾಮಕ ದಳ ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಸ್ಥಳೀಯ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Leave a Reply