ಭಟ್ಕಳ : ಮುಂಡಳ್ಳಿ ಮೊಗೇರಕೇರಿ ಯುವಕ ಕಾಣೆ

ಭಟ್ಕಳ: ಕಳೆದ ಜೂನ್ 17ರಂದು ಕಂಪನಿಯ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಭಟ್ಕಳ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಹೋದ ಯುವಕನೋರ್ವ, ಅತ್ತ ಹುಬ್ಬಳ್ಳಿಗೆ ಹೋಗದೇ ಇತ್ತ ಮನೆಗೂ ಹಿಂದಿರುಗದೇ ನಾಪತ್ತೆಯಾಗಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

 ಕಾಣೆಯಾದ ಯುವಕನನ್ನು ತಾಲೂಕಿನ ಮುಂಡಳ್ಳಿ ಮೊಗೇರಕೇರಿ ನಿವಾಸಿ ಕೃಷ್ಣ ತಂದೆ ಲಚ್ಮಯ್ಯ ಮೊಗೇರ (27) ಹುಲಿಕುರ್ಕನಮನೆ ಎಂದು ಗುರುತಿಸಲಾಗಿದೆ.

23june4

ಬಿಕಾಮ್ ವಿದ್ಯಾರ್ಹತೆಯನ್ನು ಹೊಂದಿರುವ ಈತ ಕನ್ನಡ ಭಾಷೆ ಮಾತನಾಡುತ್ತಿದ್ದು, ಗೋಧಿ ಮೈಬಣ್ಣ, ದುಂಡು ಮುಖ, ಸದೃಢ ಮೈಕಟ್ಟನ್ನು ಹೊಂದಿದ್ದಾನೆ. ಈತ ಮನೆಯಿಂದ ಹೊರಟ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಕೆಂಪು ಶರ್ಟನ್ನು ಧರಿಸಿರುತ್ತಾನೆ.

ಈ ಸಂಬಂಧ ಈತನ ಸಹೋದರ ಗುರುರಾಜ ತಂದೆ ಲಚ್ಮಯ್ಯ ಮೊಗೇರ ಎಂಬುವವರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ಕೂಡಲೇ ಭಟ್ಕಳ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ಶಹರ ಠಾಣಾ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Leave a Reply