ಭಟ್ಕಳ ಮುಠ್ಠಳ್ಳಿ ಕಟ್ಟೇವೀರ ದೇವಸ್ಥಾನದ ಕಾಣಿಕೆ ಹುಂಡಿ ಕಳುವು

ಭಟ್ಕಳ: ತಾಲೂಕಿನಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಗುರುವಾರ ತಡ ರಾತ್ರಿ ತಾಲೂಕಿನ ಮುಠ್ಠಳ್ಳಿ ಕಟ್ಟೆವೀರ ದೇವಸ್ಥಾನದ ಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

1

ಶುಕ್ರವಾರ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ದ ಭಕ್ತರಿಗೆ ಕಳ್ಳತನ ನಡೆದಿರುವ ಬಗ್ಗೆ ತಿಳಿದು ಬಂದಿದ್ದು, ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಕಾಣಿಕೆ ಹುಂಡಿಯನ್ನು ಒಡೆದು ಹಣವನ್ನು ದೋಚಿರುವ ಕಳ್ಳರು ಖಾಲಿ ಹುಂಡಿಯನ್ನು ದೇವಸ್ಥಾನದ ಹತ್ತಿರವಿರುವ ತೆಂಗಿನಮರದ ಬಳಿ ಎಸೆದು ಹೋಗಿದ್ದಾರೆ. 30 ಸಾವಿರ ರುಪಾಯಿಗೂ ಅಧಿಕ ಹಣ ಕಳುವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಳ್ಳರು ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳನ್ನೇ ಗುರಿ ಮಾಡಿ ಕಳ್ಳತನ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಪಿಐ ಪ್ರಶಾಂತ ನಾಯಕ, ಎಸೈ ಜಾನ್ಸನ್ ಡಿಸೋಜಾ, ಎಸೈ ಮಂಜಪ್ಪ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.

Leave a Reply