ಭಯೋತ್ಪಾದಕ ನೆಲೆಗಳ ಮೇಲೆ ಸೇನಾ ಧಾಳಿ : ಗಣೇಶ್ ಕಾರ್ಣಿಕ್ ಅಭಿನಂದನೆ

ಭಯೋತ್ಪಾದಕ ನೆಲೆಗಳ ಮೇಲೆ ಸೇನಾ ದಾಳಿ: ಗಣೇಶ್ ಕಾರ್ಣಿಕ್ ಅಭಿನಂದನೆ

ಮಂಗಳೂರು: ದೇಶದಲ್ಲಿನ ವಿವಿಧ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಯಶಸ್ವಿ ಧಾಳಿಗೆ ಹಾಗೂ ಇದರ ನಿರ್ಣಯವನ್ನ ಕೈಗೊಂಡ ಪ್ರಧಾನಿಗಳನ್ನು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿನಂದಿಸಿದ್ದಾರೆ.

ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಗಡಿಯಾಚೆಯಿಂದ ನಿರಂತರವಾಗಿ ಪಾಕಿಸ್ಥಾನದಿಂದ ತರಬೇತಿಗೊಂಡು ನಮ್ಮ ದೇಶದ ಸೇನಾ ನೆಲೆಗಳು ಸೇರಿದಂತೆ ವಿವಿಧೆಡೆ ಭಯೋತ್ಪಾದಕ ಚಟುವಟಿಕೆಗಳ ಮೂಲಕ ನಾಗರಿಕರ ಜೀವ ಮತ್ತು ಸ್ವತ್ತುಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಪಾಕಿಸ್ಥಾನದ ಪ್ರಾಕ್ಸಿ ವಾರ್‍ಗೆ ದಿಟ್ಟ ಉತ್ತರ ನೀಡಿದ ಸೇನೆಯ ಕ್ರಮ ಶ್ಲಾಘನೀಯ.

ಇತ್ತೀಚೆಗೆ ಉರಿ ಸೇನಾ ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ರಾಜತಾಂತ್ರಿಕ ನಿರ್ಣಯಗಳೊಂದಿಗೆ ಸೆ.29ರ ಮುಂಜಾನೆ ನಮ್ಮ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳಿಗೆ ನುಗ್ಗಿ 38 ಜನ ಭಯೋತ್ಪಾದಕರನ್ನು (2 ಪಾಕ್ ಸೈನಿಕರು ಸೇರಿದಂತೆ) ಸದೆ ಬಡಿದಿರುವ ಭಾರತೀಯ ಸೇನೆಯ ಪರಾಕ್ರಮಿ ಸೈನಿಕರನ್ನು, ಅತ್ಯಂತ ಕರಾರುವಾಕ್ಕಾಗಿ ವಿಶೇಷ ಕಾರ್ಯಚರಣೆಯನ್ನು ವ್ಯವಸ್ಥಿತ ಹಾಗೂ ಯೋಜನಾಬದ್ಧವಾಗಿ ಕೈಗೊಂಡ ಸೇನೆಯ ಅಧಿಕಾರಿಗಳನ್ನು ಮತ್ತು ಈ ದಿಟ್ಟ ನಿರ್ಣಯವನ್ನು ಕೈಗೊಂಡ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವನ್ನು ಸಮಸ್ತ ಭಾರತೀಯರ ಹಾಗೂ ಮಾಜಿ ಸೈನಿಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Leave a Reply