ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ ಅಧ್ಯಕ್ಷರಾಗಿ ಆಸೀಫ್ ಇಕ್ಬಾಲ್

ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ ಅಧ್ಯಕ್ಷರಾಗಿ ಆಸೀಫ್ ಇಕ್ಬಾಲ್

ಸುರಿನೇಮ್ ದೇಶದ ದಕ್ಷಿಣ ಭಾರತ ಗೌರವ ರಾಯಭಾರಿ ಆಸೀಫ್ ಇಕ್ಬಾಲ್ ಅವರು ಭಾರತೀಯ ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಒಕ್ಕೂಟ (ಎಲ್‍ಎಸಿಎಫ್‍ಐ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈವರೆಗೆ ಎಲ್‍ಎಸಿಎಫ್‍ಐ ನ ಕಾರ್ಯಕಾರಿ ನಿರ್ದೇಶಕರಾಗಿದ್ದ ಆಸೀಫ್ ಇಕ್ಬಾಲ್, ಭಾರತೀಯ ರಕ್ಷಣಾ ಉತ್ಪನ್ನ ಮೂಲಸೌಕರ್ಯ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಚಿಲಿ ಗಣರಾಜ್ಯದ ವಿದೇಶಾಂಗ ಇಲಾಖೆಯ ಅಲೆಕ್ಸಾಂಡರ್ ವೊಣ್ ಆರಿಯವರು ಎಲ್‍ಎಸಿಎಫ್‍ಐ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Asif Iqbal-02

ಎಲ್‍ಎಸಿಎಫ್‍ಐ 33 ದೇಶಗಳ ಸಂಘಟನೆಯಾಗಿದ್ದು ಇದರಲ್ಲಿ ಲ್ಯಾಟಿನ್ ಹಾಗೂ ಕೆರಿಬಿಯನ್ ದ್ವೀಪ ದೇಶಗಳು ಸದಸ್ಯತ್ವ ಹೊಂದಿವೆ. ಆಸೀಫ್ ಇಕ್ಬಾಲ್ ನೇಮಕಾತಿಯನ್ನು ಎಲ್‍ಎಸಿಎಫ್‍ಐ ಮುಖ್ಯ ನಿಯಮಾಧಿಕಾರಿ ಹೆಂಡ್ರಿಕ್ಸ್ ವೋನ್ ಡೋರ್ಡ್, ಎಲ್‍ಎಸಿಎಫ್‍ಐ ಕೃಷಿ ಆಯುಕ್ತ ಹೆಲೆನ್ ಬಾಸ್, ಎಲ್‍ಎಸಿಎಫ್‍ಐ ರಕ್ಷಣಾ ಆಯುಕ್ತ ಓಝ್ ಹರ್ಪಜ್, ಎಲ್‍ಎಸಿಎಫ್‍ಐ ಪೆಟ್ರೋಲಿಯಂ ಆಯುಕ್ತ ಕಲೆನ್ ಬಾರ್ಡ್ ಹಾಗೂ ಬ್ರೆಝಿಲ್‍ನ ಆರ್ಥಿಕ ಆಯುಕ್ತ ಅವಿಶೆಕ್ ನಿಗಮ್ ಸಮ್ಮುಖದಲ್ಲಿ ಘೋಷಿಸಲಾಯಿತು. ಇನ್‍ಫೋಸಿಸ್ ಕಂಪನಿ ಬ್ರೆಝಿಲ್‍ನಲ್ಲಿ ಹೂಡಿಕೆ ಮಾಡುವಂತೆ ಮಾಡುವಲ್ಲಿ ಅವಿಶೆಕ್ ನಿಗಮ್ ಮಹತ್ವದ ಪಾತ್ರ ವಹಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಆಸೀಫ್ ಇಕ್ಬಾಲ್ ನೇಮಕಾತಿಯನ್ನು ಬೆಂಗಳೂರಿನಲ್ಲಿ ಎಲ್‍ಎಸಿಎಫ್‍ನ ಸಲಹೆಗಾರ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಅವರು ಘೋಷಿಸಿದ್ದಾರೆ. ಎಲ್‍ಎಸಿಎಫ್ ಕರ್ನಾಟಕ ಪ್ರದೇಶ ಆರ್ಥಿಕ ವ್ಯಾಪಾರ ಸಂಸ್ಥೆಯ (ಕೆಆರ್‍ಇಟಿಒ) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ.

ಮಹತ್ವದ ನೇಮಕಾತಿ
ಲ್ಯಾಟಿನ್ ಹಾಗೂ ಕೆರಿಬಿಯನ್ ದೇಶಗಳ ನಡುವಣ ಭಾರತದ ಸಂಬಂಧ ಉತ್ತಮಗೊಳ್ಳುತ್ತಿರುವ ಮಹತ್ವದ ಘಟ್ಟದಲ್ಲಿ ಆಸೀಫ್ ಇಕ್ಬಾಲ್ ನೇಮಕಾತಿ ನಡೆದಿದೆ. ಕರ್ನಾಟಕ ಪ್ರದೇಶ ಆರ್ಥಿಕ ವ್ಯಾಪಾರ ಸಂಸ್ಥೆಯ (ಕೆಆರ್‍ಇಟಿಒ)ನ ಅಧ್ಯಕ್ಷ ಶ್ರೀ ಎಸ್ ಕೃಷ್ಣ ಕುಮಾರ್ ಆಸೀಫ್ ಇಕ್ಬಾಲ್ ನೇಮಕಾತಿಯನ್ನು ಸ್ವಾಗತಿಸಿದ್ದಾರೆ. “ಆಸೀಫ್ ಇಕ್ಬಾಲ್ ಅವರ ದಕ್ಷ ನಾಯಕತ್ವ ಭಾರತ ಹಾಗೂ ಲ್ಯಾಟಿನ್, ಕೆರಿಬಿಯನ್ ದೇಶಗಳ ನಡುವಣ ವ್ಯಾಪಾರ ವಹಿವಾಟಿನಲ್ಲಿ ಹೊಸ ದಾಖಲೆ ಸಾಧಿಸಲಿ,” ಎಂದು ಅವರು ಹಾರೈಸಿದ್ದಾರೆ.

Leave a Reply