ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್- ಪ್ರೇರಣ ಶಿಬಿರ ಉದ್ಘಾಟನೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್- ಪ್ರೇರಣ ಶಿಬಿರ ಉದ್ಘಾಟನೆ

ಉಡುಪಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಮತ್ತು ಉಡುಪಿ ಜಿಲ್ಲಾ ಸಂಸ್ಥೆ ಇವರ ಜಂಟಿ ಆಶ್ರಯದಲ್ಲಿ ಮೈಸೂರು ವಿಭಾಗೀಯ ಮಟ್ಟದ ರೇಂಜರ್ಸ್ ವಿದ್ಯಾರ್ಥಿನಿಯರ ಪ್ರೇರಣ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ಡಾ| ವಿ.ಎಸ್. ಆಚಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರ ಪ್ರಗತಿ ನಗರ, ಅಲೆವೂರು,ಮಣಿಪಾಲ ಇಲ್ಲಿ ನಡೆಯಿತು.

????????????????????????????????????

ಶಿಬಿರದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಇದರ ಉಪಾಧ್ಯಕ್ಷರಾದ ಶ್ರೀಮತಿ ಶಾಂತಾ ವಿ.ಆಚಾರ್ಯ ಇವರು ನೆರವೇರಿಸಿದರು.ಆಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯತ್ ,ಉಡುಪಿ ಇವರು ವಹಿಸಿಕೊಂಡಿದ್ದರು.. ಇವರು ಸ್ಕೌಟ್ಸ್ ಮತ್ತು ಗೈಟ್ಸ್ ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಂಡು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿರತ್ತೀರುವ ಬಗ್ಗೆ ಪ್ರಶಂಸಿದರು.ಮಹಿಳಾ ಸಬಲೀಕರಣ ಅತಿ ಮುಖ್ಯವಾಗಿದ್ದು ಪ್ರೇರಣ ಶಿಬಿರದ ಮೂಲಕ ರೇಂಜರ್ ವಿದ್ಯಾರ್ಥಿನಿಯರಲ್ಲಿ ಸಂಯಮ,ವ್ಯಕ್ತಿತ್ವ ವಿಕಸನ, ಸ್ವಾಭಿಮಾನದ ಬದುಕು,ಸಾಂಘಿಕ ಬದುಕನ್ನು ಅನುಷ್ಠಾನಗೊಳಿಸುವಂತೆ ತಿಳಿಸಿದರು.

ಕಾರ್ಯಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಯಶ್‍ಪಾಲ್ ಸುವರ್ಣ ಅಧ್ಯಕ್ಷರು ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟಗಾರ ಸಹಕಾರಿ ಸಂಘ .ಇವರು ಸ್ಕೌಟ್ಸ್ ಮತ್ತು ಗೈಟ್ಸ್ ಶಿಬಿರವು ರೇಂಜರ್ ವಿದ್ಯಾರ್ಥಿನಿಯರಲ್ಲಿ ಮುಂದಿನ ಜೀವನಕ್ಕೆ ದಾರಿ ದೀಪವಾಗಿರುತ್ತದೆ ಎಂದರು.
ಸಭೆಯಲ್ಲಿ ಎಡ್ವಿನ್ ಆಳ್ವ(ಜಿಲ್ಲಾ ಸ್ಕೌಟ್ ಆಯುಕ್ತರು) ಶೇಖರ್ ಪೂಜಾರಿ(ಜಿಲ್ಲಾ ಕಾರ್ಯದರ್ಶಿ) ಜ್ಯೋತಿ ಜೆ ಪೈ(ಜಿಲ್ಲಾ ಉಪಾಧ್ಯಕ್ಷರು) ಕೊಗ್ಗ ಗಾಣಿಗ(ಜಿಲ್ಲಾ ತರಬೇತಿ ಸ್ಕೌಟ್ ಆಯುಕ್ತರು) ವನಿತಾ ರಾವ್(ಜಿಲ್ಲಾ ತರಬೇತಿ ಗೈಡ್ ಆಯುಕ್ತರು)ಅನಂದ ಅಡಿಗ ,ಶಾಂತಾ ಕುಮಾರಿ ಇವರುಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಘಟಕರಾದ ಸುಮನಶೇಖರ್ ಸಂಘಟಿಸಿದರು.

ಎಸ್.ಕೆ ಪ್ರಭಾ(ರಾಜ್ಯ ಜಂಟಿ ಕಾರ್ಯದರ್ಶಿ) ಪ್ರಸ್ತಾವಿಕವಾಗಿ ಮಾತನಾಡಿದರು. ರಾಜಲಕ್ಷ್ಮಿ ಡಿ ಶೆಟ್ಟಿ (ಜಿಲ್ಲಾ ಗೈಡ್ ಆಯುಕ್ತರು) ಸ್ವಾಗತಿಸಿದರು, ಕು|ಸವಿತಾ ಜೋಗಿ(ಶಿಬಿರದ ನಾಯಕಿ)ಕಾರ್ಯಕ್ರಮವನ್ನು ನಿರೂಪಿದರು. ಜ್ಯೋತಿ ಆಚಾರ್ಯ ವಂದಿಸಿದರು.

Leave a Reply