ಭಾರತ ಮಹಿಳಾ ಕಬಡ್ಡಿ ತಂಡ ನಾಯಕಿ ಶ್ರೀಮತಿ ಮಮತಾ ಪೂಜಾರಿ ರುಡ್‍ಸೆಟ್ ಭೇಟಿ

ಉಜಿರೆ : ದೇಶದ ಬಡ ಜನರ ಬದುಕಿಗೆ ಭದ್ರ ಬುನಾದಿಯಾಗಿ ರುಡ್‍ಸೆಟ್ ಸಂಸ್ಥೆಯು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕನಸಾಗಿ ಹುಟ್ಟಿ ದೇಶದಾದ್ಯಂತ ಕಾರ್ಯಾಚರಿಸುತ್ತಿರುವುದರ ಜೊತೆಗೆ ಮಹಿಳೆಯರೂ ಕೂಡಾ ಸ್ವಾವಲಂಬಿ ಬದುಕಿಗೆ ದಿಟ್ಟ ಹೆಜ್ಜೆಯನ್ನಿಡುತ್ತಿರುವುದು ಪ್ರಶಂಸನೀಯ ಎಂದು ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ, ಅರ್ಜುನ ಮತ್ತು ಎಕಲವ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಮಮತಾ ಪೂಜಾರಿಯವರು ಅಭಿಪ್ರಾಯಪಟ್ಟರು.

1

 ಅವರು ಇಂದು ರುಡ್‍ಸೆಟ್ ಭೇಟಿಯ ಸಂದರ್ಭ ತರಬೇತಿ ಪಡೆದು ಸಮಾರೋಪ ಹಂತದಲ್ಲಿದ್ದ ಮಹಿಳೆಯರ ವಸ್ತ್ರವಿನ್ಯಾಸ ತರಬೇತಿಯ ಶಿಭಿರಾರ್ಥಿಗಳಿಗೆ ಹಿತ ವಚನವನ್ನು ನೀಡುತ್ತಾ ಪ್ರಮಾಣ ಪತ್ರಗಳನ್ನು ವಿತರಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ.ಅಜಿತ್ ಕೆ. ರಾಜಣ್ಣವರ್ ಉಪಸ್ಥಿತರಿದ್ದರು. ಸಂಸ್ಥೆಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ರವರು ಸ್ವಾಗತಿಸಿ ಶ್ರೀಮತಿ ಅನಸೂಯ ಕಾರ್ಯಕ್ರಮ ನಿರೂಪಿಸಿದರು.

ಈ ತರಬೇತಿ ಕಾರ್ಯಕ್ರಮದಲ್ಲಿ 25 ಮಹಿಳಾ ಅಭ್ಯರ್ಥಿಗಳು ತರಬೇತಿಯ ಪ್ರಯೋಜನ ಪಡೆದರು.

Leave a Reply

Please enter your comment!
Please enter your name here