ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ: ವಿವಾದಕ್ಕೆ ಕಾರಣವಾದ ವೀಡಿಯೊ

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ: ವಿವಾದಕ್ಕೆ ಕಾರಣವಾದ ವೀಡಿಯೊ

ಉಡುಪಿ: ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ಪೋಲಿಸರು ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಆರೋಪಿಗಳೊಂದಿಗೆ ಪೊಲೀಸರು ನಿಟ್ಟೆಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಊಟ ಮಾಡಿ ಹೊರ ಬರುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದು ಮತ್ತೂಂದು ವಿವಾದಕ್ಕೆ ಕಾರಣವಾಗಿದೆ.

image001bhaskar-shetty-murder-case-20160812-001 image002bhaskar-shetty-murder-case-20160812-002 image003bhaskar-shetty-murder-case-20160812-003 image003bhaskar-shetty-murder-case-20160812-003 image001bhaskar-shetty-murder-case-20160812-001

ಈ ಹಿಂದೆ ತನಿಖಾಧಿಕಾರಿಯಾಗಿದ್ದ ಗಿರೀಶ್‌ ತನ್ನ ಜೀಪಿನ ಮುಂದಿನ ಸೀಟಿನಲ್ಲಿ ಆರೋಪಿ ನವನೀತ್‌ನನ್ನು ಕುಳ್ಳಿರಿಸಿಕೊಂಡು ಹೋಗಿರುವು ದು ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೆ ಮತ್ತೂಂದು ವಿವಾದ ಬೆಳಕಿಗೆ ಬಂದಿದೆ. ಈ ಮೂಲಕ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆಂಬ ಆರೋಪಗಳಿಗೆ ಪುಷ್ಟಿ ನೀಡಿವೆ.

ಹೊಟೇಲಿನ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯದಲ್ಲಿ ಪೊಲೀಸರು ಆರೋಪಿಗಳನ್ನು ರಾಜ್ಯಾತಿಥ್ಯದಲ್ಲಿ ಕರೆದುಕೊಂಡು ಬಂದು ಹೊಟೇಲಿನಲ್ಲಿ ಊಟ ಮಾಡಿ ಹೊರ ಬರುವುದು ಕಂಡುಬರುತ್ತದೆ. ಈ ದೃಶ್ಯಗಳು ಆ.10ರಂದು ಸಂಜೆ 4ಗಂಟೆಗೆ ದಾಖಲಾಗಿರುವುದು ತಿಳಿದು ಬರುತ್ತದೆ. ಇವರೊಂದಿಗೆ ಸಾಕ್ಷ ನಾಶ ಮಾಡಿರುವ ಆರೋಪಕ್ಕೆ ಒಳಗಾಗಿರುವ ನಿರಂಜನ್‌ ಭಟ್‌ನ ತಂದೆ ಶ್ರೀನಿವಾಸ ಭಟ್‌ ಹಾಗೂ ಕಾರು ಚಾಲಕ ರಾಘವೇಂದ್ರ ಕೂಡ ಇರುವುದು ಈ ದೃಶ್ಯಗಳಲ್ಲಿ ಕಂಡುಬರುತ್ತದೆ.

Leave a Reply