ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಮಣಿಪಾಲ ಆಸ್ಪತ್ರೆಗೆ

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಬೇರೆ ಆಸ್ಪತ್ರೆಗೆ ದಾಖಲು?

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರ ವಶದಲ್ಲಿದ್ದು, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಜ್ಯೋತಿಷಿ ನಿರಂಜನ್ ಭಟ್ ನನ್ನು ಹೆಚ್ಚಿನ ಚಿಕಿತ್ಸೆಗೆ  ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಬಲ್ಲ ಮೂಲಗಳಿದಂದ ತಿಳಿದು ಬಂದಿದೆ.

niranjanbhat-Bhaskarshetty-02

ಪೋಲಿಸರ ವಶದಲ್ಲಿದ್ದ ಆರೋಪಿ ನಿರಂಜನ್ ಭತ್ ತನ್ನ ಕೈಯಲ್ಲಿದ್ದ ವಜ್ರದ ಉಂಗುರ ಮತ್ತು ಎರಡು ಕಿವಿಯೋಲೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಆತನನ್ನು ಅಜ್ಜರಕಾಡುವಿನಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ನುಂಗಿದ್ದ ಸೊತ್ತುಗಳನ್ನು ವಿಸರ್ಜಿಸಲು ಸೂಕ್ತ ಚಿಕಿತ್ಸೆಯನ್ನು ನೀಡಲಾಗಿತ್ತು. ಈತ ನುಂಗಿದ್ದ ವಜ್ರದ ಉಂಗುರ ಮತ್ತು ಒಂದು ಕಿವಿಯ ಒಲೆ ಇಂದು ಬೆಳಿಗ್ಗೆ ಶೌಚದೊಂದಿಗೆ ಹೊರಬಂದಿದೆ ಎನ್ನಲಾಗಿದ್ದು, ಇನ್ನೊಂದು ಒಲೆಯು ಹೊಟ್ಟೆ ಸೇರಿದಾಗ ಯಾವ ಸ್ಥಳದಲ್ಲಿತ್ತೋ, ಈಗಲೂ ಅಲ್ಲೆ ಇದೆ. ಅದನ್ನು ಹೊರತೆಗೆಯಲು ಹೆಚ್ಚುವರಿ ಚಿಕಿತ್ಸೆಯ ಅಗತ್ಯತೆ ಇದ್ದು, ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿದೆ.

ಆರೋಪಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಪ್ರಕರಣದ ತನಿಖಾಧಿಕಾರಿ ನ್ಯಾಯಾಲಯದ ಅನುಮತಿ ಕೇಳಿದ್ದು, ಸಂಜೆ ವೇಳೆ ಅನುಮತಿ ಲಭಿಸಿದ ಕೂಡಲೇ ಅಜ್ಜರಕಾಡು ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಆರೋಪಿ ನಿರಂಜನ ಭಟ್ಟನನ್ನು ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

Leave a Reply