ಭಾಸ್ಕರ್ ಶೆಟ್ಟಿ ಕೊಲೆ ; ಪತ್ನಿ, ಮಗನಿಗೆ ಅಗೋಸ್ತ್ 12 ರ ವರೆಗೆ ಪೋಲಿಸ್ ಕಸ್ಟಡಿ

ಭಾಸ್ಕರ್ ಶೆಟ್ಟಿ ಕೊಲೆ ; ಪತ್ನಿ, ಮಗನಿಗೆ ಅಗೋಸ್ತ್ 12 ರ ವರೆಗೆ ಪೋಲಿಸ್ ಕಸ್ಟಡಿ

ಉಡುಪಿ: ಹೋಟೆಲ್ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತರಾಗಿರುವ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್ ಶೆಟ್ಟಿಯನ್ನು ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಿದ್ದು, ನ್ಯಾಯಲಯ ಅಗೋಸ್ತ್ 12 ರ ವರೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಿದೆ.

bhaskar-shetty-murder-wife-son-produced-court-20160808-03 bhaskar-shetty-murder-wife-son-produced-court-20160808-00 bhaskar-shetty-murder-wife-son-produced-court-20160808-01 bhaskar-shetty-murder-wife-son-produced-court-20160808-02

ಸೋಮವಾರ ಬೆಳಿಗ್ಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಆರೋಪಿಗಳಿಬ್ಬರುನ್ನು ಪ್ರಕರಣದ ತನಿಖಾಧಿಕಾರಿ ಮಣಿಪಾಲ ಪೋಲಿಸ್ ಠಾಣಾ ನೀರಿಕ್ಷಕ ಗಿರೀಶ್ ಹಾಜರುಪಡಿಸಿದರು. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರವೀಣ್ ನಾಯಕ್ ಪೋಲಿಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಧಿಶರಿಗೆ ಮನವಿ ಮಾಡಿದರು. ಆರೋಪಿಗಳ ಪರ ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರತಿನಿಧಿಸಿದ್ದರು.

ವಾದವನ್ನು ಆಲೀಸಿದ ನ್ಯಾಯಾಧಿಶರು ಆರೋಪಿಗಳಿಬ್ಬರನ್ನು ಅಗೋಸ್ತ್ 12 ರವರೆಗೆ ಪೋಲಿಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.

Leave a Reply

Please enter your comment!
Please enter your name here