ಭಾಸ್ಕರ ಕೊಗ್ಗ ಕಾಮತ, ಡಾ. ಒಲಿಂಡಾ ಪಿರೆರಾರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ

ಭಾಸ್ಕರ ಕೊಗ್ಗ ಕಾಮತ, ಡಾ. ಒಲಿಂಡಾ ಪಿರೆರಾರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ನೀಡಲಾಗುವ “ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ -2016 ಗಳನ್ನು (ಕೊಂಕಣಿ ಪುರುಷರ ವಿಭಾಗ) ಹಿರಿಯ ತಲೆಮಾರುಗಳಿಂದ ಬಂದ ಸಾಂಸ್ಕøತಿಕ ಪಾರಂಪಾರಿಕ ಬೊಂಬೆಯಾಟಗಳನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿ, ಜಗತ್ ವಿಖ್ಯಾತರಾದ ಕುಂದಾಪುರದ ಶ್ರೀ ಭಾಸ್ಕರ ಕೊಗ್ಗ ಕಾಮತ (ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನ ಕುದುರು) ಇವರಿಗೆ ‘ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

basti-vaman-shenoy-award

(ಕೊಂಕಣಿ ಮಹಿಳಾ ವಿಭಾಗದಲ್ಲಿ ) ಹಿರಿಯ ವ್ಯಕ್ತಿಗಳಾಗಿ ಬಹುಮುಖ ಸಾಮಾಜಿಕ ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಸೇವಾ ವೃತ್ತಿಯನ್ನು ಸಲ್ಲಿಸಿ, ಮಂಗಳೂರಿನ ರೋಶನಿ ನಿಲಯದಲ್ಲಿ 1960 ರಲ್ಲಿ “ಸ್ಕೂಲ್ ಆಫ್ ಸೋಶಿಯಲ್ ವಕ್ರ್ಸ್” ಎಂಬ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ, ದಿಲ್ಲಿಯಲ್ಲಿ ಇನ್‍ಸ್ಟಿಟ್ಯೂಟ್ ಆಫ್ ವರ್ಕಿಂಗ್ ವುಮೆನ್ ಡೆವಲಪ್‍ಮೆಂಟ್ ಸೆಂಟರ್ ಆಫ್ರಿಕಾದ ನೈರೋಬಿಯಲ್ಲಿ ನೆಲೆಸಿ ಅಲ್ಲಿಯ ‘ನ್ಯೂ ಪ್ರಾವಿನ್ಸಿಯಲ್ ಹೌಸ್’ ಎಂಬ ಸಂಸ್ಥೆ ಹಾಗೂ ಮಂಗಳೂರಿನಲ್ಲಿ “ವಿಶ್ವಾಸ್” ಎಂಬ ಹಿರಿಯ ನಾಗರಿಕರ ಸೇವಾ ಸಂಸ್ಥೆ ಸ್ಥಾಪಿಸಿ ಸಾಮಾಜಿಕ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ 93 ರ ಹರೆಯದ ಡಾ. ಒಲಿಂಡಾ ಪಿರೆರಾ ಇವರಿಗೆ ನೀಡಲು ನಿರ್ಣಾಯಕ ಸಮಿತಿ ನಿರ್ಧರಿಸಿದೆ. ಎರಡೂ ಪ್ರಶಸ್ತಿಗಳಿಗೆ ಮಣಿಪಾಲ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಟಿ. ವಿ. ಮೋಹನದಾಸ ಪೈಯವರು ಪ್ರಾಯೋಜಕರಾಗಿರುತ್ತಾರೆ.

ಈ ಎರಡೂ ಪ್ರಶಸ್ತಿಗಳನ್ನು ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈಯವರ ಜನ್ಮ ದಿನದ ಸಂಧರ್ಭದಲ್ಲಿ, ಟಿ. ವಿ. ರಮಣ ಪೈ ಸಭಾ ಮಂದಿರದಲ್ಲಿ ಜರುಗಲಿರುವ ಸಮಾರಂಭದಲ್ಲಿ ನೀಡಲಾಗುವುದು. ಈ ಅಂಗವಾಗಿ ವಿಶ್ವ ಕೊಂಕಣಿ ಕೇಂದ್ರದಲ್ಲಿ 2 ದಿನಗಳ “ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹ” ಕೂಡಾ ನಡೆಯಲಿದೆ. ಎಂದು ವಿಶ್ವ ಕೊಂಕಣಿ ಕೇಂದ್ರ ಪ್ರಕಟಣೆ ತಿಳಿಸಿದೆ.

Leave a Reply