ಭುಜಂಗ ಪಾರ್ಕ್ ಅಭಿವೃದ್ಧಿ ಶೀಘ್ರದಲ್ಲಿ ಸಭೆ : ಪ್ರಮೋದ್ ಮಧ್ವರಾಜ್

ಭುಜಂಗ ಪಾರ್ಕ್ ಅಭಿವೃದ್ಧಿ ಶೀಘ್ರದಲ್ಲಿ ಸಭೆ : ಪ್ರಮೋದ್ ಮಧ್ವರಾಜ್

ಉಡುಪಿ: ಮಹಾತ್ಮಾಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಉಡುಪಿಗೆ ಭೇಟಿ ಕೊಟ್ಟಾಗ ಸಭೆ ನಡೆಸಿದ ಅಜ್ಜರಕಾಡು ಭುಜಂಗ ಪಾರ್ಕ್ ಪರಿಸರವನ್ನು ಅಭಿವೃದ್ಧಿ ನಡೆಸುವ ಕುರಿತು ಹಿರಿಯ ನಾಗರಿಕರ ದಿನನಿತ್ಯ ಉಪಯೋಗಿಸುವ ವಿದ್ಯಾರ್ಥಿಗಳ, ಸಾರ್ವಜನಿಕರ ಸಭೆಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು. ಸಾಮಾಜಿಕ ಬದ್ಧತಾ ಯೋಜನೆಯಡಿ ಖಾಸಗೀ ಸಂಸ್ಥೆಗಳಸಹಯೋಗದಲ್ಲಿ ಇನ್ನಷ್ಟು ಅಭಿವೃದ್ಧಿಗೊಳಿಸಲು ಮಾತುಕತೆಗಳು ನಡೆಯುತ್ತಿವೆ ಎಂದು ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಅವರು ಭುಜಂಗ ಪಾರ್ಕಿನಲ್ಲಿ ನಿರ್ಮಿಸಿದ ‘ವಿಶ್ರಾಂತಿ ಧಾಮ’ ವನ್ನು ಉದ್ಘಾಟಿಸಿ ಮಾತನಾಡಿದರು.

vishranthi-dhama-00 vishranthi-dhama-01

ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ತಮ್ಮ ಯೌವ್ವನದ ದಿನಗಳಲ್ಲಿ ಈ ಪರಿಸರದಲ್ಲಿ ನಡೆಸಿದ ಶ್ರಮದಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೆಲುಕು ಹಾಕಿ ಮುಂದಿನ ದಿನಗಳಲ್ಲಿ ಈ ಪಾರ್ಕ್‍ನ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಸಂಸ್ಥೆಯ ಪಾಲುದಾರರಾದ ಸಾಯಿನಾಥ್ ಹೆಗ್ಡೆ, ಹರೀಶ್ ಕಿಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ, ಬಿ. ನರಸಿಂಹ ಮೂರ್ತಿ, ಸದಸ್ಯ ಗಿರೀಶ್ ಕುಮಾರ್, ನಗರಸಭಾ ಪೌರಾಯುಕ್ತ ಮಂಜುನಾಥಯ್ಯ, ಸದಸ್ಯರಾದ ನಾರಾಯಣ ಕುಂದರ್, ಹಸನ್ ಅಜ್ಜರಕಾಡು, ಎಂ.ಎ. ಗಪೂರ್, ದಿನೇಶ್ ಪುತ್ರನ್, ಮುರಲಿ ಶೆಟ್ಟಿ ಇಂದ್ರಾಳಿ, ಅಶೋಕ್ ಕೊಡವೂರು,ಹಿರಿ ಸಹಕಾರಿ ಧುರೀಣರಾದ ಅಲೆವೂರು ಗಣಪತಿ ಕಿಣಿ, ಶಾಂತಿ ಜಿ. ಕಿಣಿ, ಶ್ರೀಧರ್ ಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ,ಹಿರಿಯ ನಾಗರಿಕರ ವೇದಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ಡಿ. ರಾವ್, ಪ್ರೋ.ವಿಲ್ಫ್ರೆಡ್ ಆರ್. ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here