ಮಂಗಳಮುಖಿಯರ ಆಶಾಕಿರಣ ಪರಿವರ್ತನ ಟ್ರಸ್ಟಿಗೆ ಸಂಸದ ನಳಿನ್ ಕುಮಾರ್ ಚಾಲನೆ

ಮಂಗಳಮುಖಿಯರ ಆಶಾಕಿರಣ ಪರಿವರ್ತನ ಟ್ರಸ್ಟಿಗೆ ಸಂಸದ ನಳಿನ್ ಕುಮಾರ್ ಚಾಲನೆ

ಮಂಗಳೂರು: ಮಂಗಳಮುಖಿಯರನ್ನು ಒಗ್ಗೂಡಿಸಿ ಒಂದೇ ಸೂರಿನಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಾಣುವ ಸಲುವಾಗಿ ಆರಂಭವಾದ ಪರಿವರ್ತನ ಚಾರಿಟೇಬಲ್ ಟ್ರಸ್ಟಿನ ಉದ್ಘಾಟನೆ ಮಂಗಳವಾರ ದಕ ಜಿಲ್ಲಾ ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಪರಿವರ್ತನ ಟ್ರಸ್ಟಿನ ಟ್ರಸ್ಟಿ ಆಶಾ ನಾಯಕ್ ಸ್ವಾಗತಿಸಿದರೆ, ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಅವರು ಟ್ರಸ್ಟಿನ ಧ್ಯೇಯ ಉದ್ದೇಶಗಳನ್ನು ವಿವರಿಸಿದರು.

ಟ್ರಸ್ಟಿನ ಉದ್ಘಾಟನೆಯನ್ನು ದಕ ಲೋಕಸಭಾ ಸದಸ್ಯರಾದ  ನಳಿನ್ ಕುಮಾರ್ ಕಟೀಲ್ ನೆರವೇರಿಸಿ ಮಾತನಾಡುತ್ತಾ ವೈಲೆಟ್ ಪಿರೇರಾ ಹಾಗೂ ನಂದಾ ಪಾಯಸ್ ಅವರ ವಿಶೇಷ ಮುತುವರ್ಜಿಯಿಂದ ಮಂಗಳಮುಖಿಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದರೊಂದಿಗೆ ತಮ್ಮ ಜೀವನದಲ್ಲಿ ಪರಿವರ್ತನೆಯನ್ನು ಕಾಣಲು ಈ ಟ್ರಸ್ಟ್ ಸಹಕಾರಿಯಾಗಲಿದ್ದು ಇದನ್ನು ಆರಂಭಿಸಿರುವುದಕ್ಕೆ ಅಭಿನಂದಿಸಿದರು. ಈ ಟ್ರಸ್ಟಿನ ಮೂಲಕ ಮಂಗಳಮುಖಿಯರು ಮುಂದಿನ ದಿನಗಳಲ್ಲಿ ತಮ್ಮ ಹಕ್ಕಗಳಿಗಾಗಿ ದನಿಯೆತ್ತಲು ಒಂದು ಉತ್ತಮ ಅವಕಾಶ ಲಭಿಸಿದಂತಾಗಿದೆ. ಇಂತಹ ಟ್ರಸ್ಟಿನ ರಚನೆಯ ಆಲೋಚನೆ ನಿಜಕ್ಕೂ ಮಾದರಿ ಕಾರ್ಯವಾಗಿದೆ ಅಲ್ಲದೆ ಎಲ್ಲಾ ಕಡೆಗಳಲ್ಲೂ ಇಂತಹ ಟ್ರಸ್ಟುಗಳು ರಚನೆಯಾಗಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಮಂಗಳಮುಖಿಯರಿಗೆ ಅಧಿಕಾರಿಗಳು ಎಲ್ಲಾ ರೀತಿಯ ರಕ್ಷಣೆಯನ್ನು ನೀಡುವುದನ್ನು ಮರೆಯಬಾರದು ಅಲ್ಲದೆ ಇಂತಹ ಟ್ರಸ್ಟುಗಳೀಗೆ ತನ್ನಿಂದಾದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

image001transgenders-parivarthan-20160830-001 image002transgenders-parivarthan-20160830-002 image005transgenders-parivarthan-20160830-005 image006transgenders-parivarthan-20160830-006 parivarthan-transgenders-20160830 image014transgenders-parivarthan-20160830-014 image004transgenders-parivarthan-20160830-004 image003transgenders-parivarthan-20160830-003 image021transgenders-parivarthan-20160830-021 image007transgenders-parivarthan-20160830-007 image008transgenders-parivarthan-20160830-008 image009transgenders-parivarthan-20160830-009 image010transgenders-parivarthan-20160830-010 image011transgenders-parivarthan-20160830-011 image015transgenders-parivarthan-20160830-015 image016transgenders-parivarthan-20160830-016 image017transgenders-parivarthan-20160830-017 image018transgenders-parivarthan-20160830-018 image019transgenders-parivarthan-20160830-019 image020transgenders-parivarthan-20160830-020 parivarthan-transgenders1-20160830

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ ಮಾತನಾಡಿ ವಾಯ್ಲೆಟ್ ಪಿರೇರಾ ಹಾಗೂ ನಂದಾ ಪಾಯಸ್ ಅವರ ಹಲವು ದಿನಗಳ ಶ್ರಮ ಇಂದು ಪರಿವರ್ತನ ಟ್ರಸ್ಟ್ ಉದ್ಘಾಟನೆಯಾಗುವುದರೊಂದಿಗೆ ಫಲ ಕಂಡಿದೆ. ಪರಿವರ್ತನ ಟ್ರಸ್ಟಿನ ಮುಕಾಂತರ ಮಂಗಳಮುಖಿಯರ ಬದುಕಿನಲ್ಲಿ ತಮ್ಮ ಸಮಸ್ಯೆಗಳೀಗೆ ಪರಿಹಾರ ಕಂಡುಕೊಳ್ಳಲು ಒಂದು ವೇದಿಕೆ ರೂಪುಗೊಂಡಂತಾಗಿದೆ. ಟ್ರಸ್ಟಿನ ಮುಕಾಂತರ ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿ ಬರಲು ಸಹಕಾರಿಯಾಗಲಿದೆ. ವೀದೇಶಗಳಲ್ಲಿ ಮಂಗಳಮುಖಿಯರಿಗೆ ಈಗಾಗಲೇ ವಿವಿಧ ಹಕ್ಕುಗಳನ್ನು ನೀಡಲಾಗಿದ್ದು, ಇದನ್ನು ಭಾರತ ಕೂಡ ಪಾಲಿಸಿದರೆ ಉತ್ತಮವಾಗಲಿದೆ. ಮಂಗಳಮುಖಿಯರನ್ನು ನೋಯಿಸುವುದರ ಬದಲಾಗಿ ಅವರೂ ಕೂಡ ನಮ್ಮಂತೆ ಮಾನವರು ಎನ್ನುವುದನ್ನು ಮರೆಯಬಾರದು ಎಂದರು.

ಪರಿವರ್ತನ ಟ್ರಸ್ಟಿನ ಲೋಗೊ ಅನಾವರಣಗೊಳಿಸಿದ ನಗರ ಪೋಲಿಸ್ ಆಯುಕ್ತ ಚಂದ್ರ ಶೇಖರ್ ಮಾತನಾಡಿ ಮಂಗಳಮುಖಿಯರಿಗಾಗಿಯೇ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿ ಆರಂಭಿಸಿದ ಪರಿವರ್ತನ ಟ್ರಿಸ್ಟಿನ ರೂವಾರಿಗಳಾದ ವೈಲೆಟ್ ಪಿರೇರಾ ಹಾಗೂ ನಂದಾ ಪಾಯಸ್ ಅವರನ್ನು ಅಭಿನಂಧಿಸಿದ ಅವರು ಬ್ರಿಟಿಷರು ಭಾರತವನ್ನು ಆಳುತ್ತಿರುವಾಗ ಅವರನ್ನು ಮೇಲ್ವರ್ಗದ ಬಿಳಿಯ ವ್ಯಕ್ತಿಗಳು ಎಂದು ಉಪಚರಿಸಲಾಗುತ್ತಿತ್ತು. ಭಾರತೀಯದಲ್ಲಿ ಕಪ್ಪುಜನಾಂಗದವರನ್ನು ಕೇಳ ಜಾತಿಯವರೆಂದು ನೋಡಲಾಗುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ಯಾರನ್ನೂ ಕೂಡ ಜಾತಿಯ ಹಾಗೂ ಬಣ್ಣದ ಆಧಾರದಲ್ಲಿ ಕೀಳಾಗಿ ಕಾಣಲು ಅವಕಾಶವಿಲ್ಲ ಕಾರಣ ಪ್ರತಿಯೊಂದು ಜೀವಿ ಕೂಡ ದೇವರ ರಚನೆ ಆದ್ದರಿಂದ ಸರ್ವರು ಸಮಾನರು. ಕೆಲವು ಮಂಗಳಮುಖಿಯರು ಮಾಡುವ ತಪ್ಪಿನಿಂದಾಗಿ ಎಲ್ಲರನ್ನೂ ದೂಷಿಸುವುದು ಸರಿಯಲ್ಲ. ಪೋಲಿಸ್ ಇಲಾಖೆ ಮಂಗಳಮುಖಿಯರುನ್ನು ಸದಾ ಗೌರವದಿಂದ ಕಾಣುವಂತೆ ತಾನು ಸೂಚನೆ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪೂಂಜಾ, ಡಿಸಿಪಿಗಳಾದ ಸಂಜೀವ್ ಪಾಟಿಲ್ ಹಾಗೂ ಶಾಂತರಾಜು, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪರಿವರ್ತನ ಮ್ಯಾನೆಜಿಂಗ್ ಟ್ರಸ್ಟಿ ವೈಲೆಟ್ ಪಿರೇರಾ, ನಂದಾ ಪಾಯಸ್ ಉಪಸ್ಥಿತರಿದ್ದರು. ಟ್ರಸ್ಟಿನ ಟ್ರಸ್ಟಿ ಆಶಾ ನಾಯಕ್ ಅತಿಥಿಗಳನ್ನು ಸ್ವಾಗತ ಮಾಡಿದರು, ವೈಲೆಟ್ ಪಿರೇರಾ ಟ್ರಿಸ್ಟಿನ ಚುಟುವಟಿಕೆ, ಕಾರ್ಯವಿವರದ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪೂಂಜಾ ಟ್ರಸ್ಟಿನ ನೂತನ ಸಮಿತಿಯನ್ನು ಉದ್ಘಾಟಿಸಿದರು. ಡಿಸಿಪಿಗಳಾದ ಡಾ ಸಂಜೀವ್ ಪಾಟೀಲ್, ಶಾಂತರಾಜು ಅವರು ಮಾತನಾಡಿ ನೂತನ ಟ್ರಸ್ಟಿಗೆ ಶುಭ ಹಾರೈಸಿದರು. ಪರಿವರ್ತನ ಟ್ರಸ್ಟಿನ ಕಾರ್ಯದರ್ಶಿ ಸಂಜನ ವಂದಿಸಿದರು. ಪರಿವರ್ತನ ಟ್ರಸ್ಟಿನ ಸದಸ್ಯೆ ರಮೋನಾ ಮಿಸ್ಕಿತ್ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Please enter your comment!
Please enter your name here