ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಗೆ 40 ರಲ್ಲಿ 13 ಮಂದಿ ಸ್ಪರ್ಧಾಳುಗಳ  ಆಯ್ಕೆ

137
Spread the love

ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಗೆ 40 ರಲ್ಲಿ 13 ಮಂದಿ ಸ್ಪರ್ಧಾಳುಗಳ  ಆಯ್ಕೆ   

ಮಂಗಳೂರು: ಬಹು ನಿರೀಕ್ಷತವಾದ ರಾಜ್ಯದಲ್ಲಿಯೇ ಪ್ರಥಮವಾಗಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ  ಮ್ಯಾಂಗಲೋರಿಯನ್ ಡಾಟ್ ಕಾಮ್, ಫ್ಯಾಷನ್ ಎಬಿಸಿಡಿ ಮತ್ತು ವಿ4 ನಿವ್ಸ್ ಇವರುಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಿರುವ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯ ಸ್ಪರ್ಧಾಳುಗಳ  ಆಯ್ಕೆ ಪ್ರಕ್ರಿಯೆ  ಗುರುವಾರ ಟ್ರಸ್ಟಿನ ಕಚೇರಿಯಲ್ಲಿ ಜರುಗಿತು.

ಅಕ್ಟೋಬರ್ 14 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ 5 ಗಂಟೆಗೆ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ ಜರುಗಲಿದ್ದು ಒಟ್ಟು 40 ಮಂದಿ ಮಂಗಳಮುಖಿಯರು ಹೆಸರು ನೋಂದಾಯಿಸಿದ್ದು ಅವರುಗಳಿಗೆ ಟ್ರಸ್ಟಿನ ಕಚೇರಿಯಲ್ಲಿ ವಿವಿಧ ರೀತಿಯ ಪರೀಕ್ಷೆ ನಡೆಸುವುದರ ಮೂಲಕ ಆಯ್ಕೆ ಪ್ರಕ್ರಿಯೆ ಜರುಗಿತು. ಒಟ್ಟು 40 ಮಂದಿ ಸ್ಪರ್ಧಾಳುಗಳಲ್ಲಿ ಕೊನೆಯದಾಗಿ 13 ಮಂದಿಯನ್ನು ಸ್ಪರ್ಧೆಗೆ ಆಯ್ಕೆ ನಡೆಸಲಾಯಿತು.

ಆಯ್ಕೆ ಪ್ರಕ್ರಿಯೆಯ ವೇಳೆ ಚಾರೀಟೇಬಲ್ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಫ್ಯಾಷನ್ ಎಬಿಸಿಡಿ ಇದರ ಪ್ರವರ್ತಕರಾದ ಚರಣ್ ಸುವರ್ಣ, ಶರಲ್ ಮನೋರಾಜ್, ಅಲಿಶಾ ರೇಗೊ, ಪರಿವರ್ತನಾ ಉಪಸ್ಥಿತರಿದ್ದರು.

ಸ್ಪರ್ಧಾಳುಗಳ ಪ್ರಕ್ರಿಯೆಗೆ ಅವರುಗಳ ಕೌಶಲ್ಯ, ಮಾತಿನ ಕೌಶಲ್ಯ, ವ್ಯಕ್ತಿತ್ವ, ಪ್ರತಿಭೆಗಳನ್ನು ಮಾನದಂಡವಾಗಿಸಿ ಆಯ್ಕೆಗಳನ್ನ ನಡೆಸಲಾಯಿತು. ಈ ವೇಳೆ ಕೆಲವೊಂದು ಸ್ಪರ್ಧಾಳುಗಳು ಆಯ್ಕೆ ಪ್ರಕ್ರಿಯೆಯ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದರೆ ಇನ್ನು ಕೆಲವರು ಹೆದರಿಕೆಯಿಂದ ಹಿಂದೆ ಉಳಿಯುವಂತಾಯಿತು.


Spread the love