ಮಂಗಳೂರಿನಲ್ಲಿ  ಕೋಡಿಂಗ್  ಹ್ಯಾಕಥಾನ್ ಮತ್ತು  ಗೇಮಥಾನ್

Spread the love

ಮಂಗಳೂರಿನಲ್ಲಿ  ಕೋಡಿಂಗ್  ಹ್ಯಾಕಥಾನ್ ಮತ್ತು  ಗೇಮಥಾನ್

ಮಂಗಳೂರಿನ ಎಲ್ಲಾ ಪ್ರತಿಭಾವಂತ ಕೋಡರ್ಗಳಿಗೆ ವೇದಿಕೆಯನ್ನೊದಗಿಸಿ, ಅವರನ್ನು ಗುರುತಿಸುವ ನಿಟ್ಟಿನಲ್ಲಿ, ಡ್ರೀಮ್ಸೋಫ್ಟ್ ಇನ್ನೋವಷನ್ ಸಂಸ್ಥೆ ಮತ್ತು ಸಹ್ಯಾದ್ರಿ ಕಾಲೇಜು ಕಾಲೇಜು ಓಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ಹಾಗೂ HostZyro ಇವುಗಳ ಸಹಯೋಗದೊಂದಿಗೆ, ಇದೇ ಬರುವ ಏಪ್ರಿಲ್ ೧೩ ಮತ್ತು ೧೪ ರಂದು, ಸಹ್ಯಾದ್ರಿ ಕಾಲೇಜು ಮಂಗಳೂರಿನಲ್ಲಿ  ಕೋಡಿಂಗ್  ಹ್ಯಾಕಥಾನ್ ಮತ್ತು  ಗೇಮಥಾನ್ (ಟೆಕ್ ಸ್ಪರ್ಧೆ) ಯನ್ನು ಏರ್ಪಡಿಸಿದೆ. ಈ ಎರಡು ದಿನಗಳಲ್ಲಿ ಹ್ಯಾಕಥಾನ್ ಮತ್ತು ಗೇಮಥಾನ್ ಅಲ್ಲದೆ, ಕೋಡ್-ಹಂಟ್, ಕೌಂಟರ್-ಸ್ಟ್ರೈಕ್ಮತ್ತು ಇನ್ನತರ ಗೇಮಿಂಗ್ ಸ್ಪರ್ಧೆಗಳೂ ನಡೆಯಲಿವೆ. ಈ ಎಲ್ಲಾ ಇವೆಂಟ್ಗಳಲ್ಲಿ  ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಹಿಡಿದು ೨೪ ವರ್ಷದ ವರೆಗಿನ ವಿದ್ಯಾರ್ಥಿಗಳು, ಫ್ರೀಲಾನ್ಸ ಮತ್ತು ವೃತ್ತಿಪರರು  ಭಾಗವಹಿಸಬಹುದು.

ಸ್ಪರ್ಧೆಯ ವಿವರಗಳು ಇಂತಿವೆ.

ಹ್ಯಾಕಥಾನ್ – ೨೪ ಗಂಟೆಗಳ ಅವಧಿಯಲ್ಲಿ, ಸ್ಪರ್ಧಿಗಳು ತಮಗೆ ಕೊಟ್ಟಂತಹ ವಿಷಯದಲ್ಲಿ ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ನಲ್ಲಿ ಮಾಡಬಹುದು.  ಬಹುಮಾನ ಮೊತ್ತ ೫೦,೦೦೦ ಮತ್ತು ಇಂಟರ್ನ್ಶಿಪ್ ಅವಕಾಶಗಳು.

ಗೇಮಥಾನ್ – ೩೦ಗಂಟೆಗಳ ಅವಧಿಯಲ್ಲಿ ಸ್ಪರ್ಧಿಗಳು ಯುನಿಟಿ ಥ್ರೀಡೀ ಗೇಮ್ ಇಂಜಿನ್ನನ್ನು ಬಳಸಿಕೊಂಡು, ಕೊಟ್ಟಂತಹ ವಿಷಯ ಆಧಾರದಲ್ಲಿ ಗೇಮನ್ನು ಅಭಿವೃದ್ಧಿ ಮಾಡಬೇಕು.  ಬಹುಮಾನ ಮೊತ್ತ ೨೦,೦೦೦ ಮತ್ತು ಇಂಟರ್ನ್ಶಿಪ್ ಅವಕಾಶಗಳು.

ಕೋಡ್-ಹಂಟ್ – ಸ್ಪರ್ಧಿಗಳುಅವರಿಗೆನೀಡಿದಂತಹಅವಧಿಯಲ್ಲಿ, ಕೊಟ್ಟಂತಹ ಸಮಸ್ಯೆ ಹೇಳಿಕೆಯನ್ನು ಯಾವುದೇ ಕೋಡಿಂಗ್ಲ್ಯಾಂಗ್ವೇಜ್ ಅನ್ನು ಬಳಸಿಕೊಂಡು ಪರಿಹರಿಸಬೇಕು. ಬಹುಮಾನ ಮೊತ್ತ ೫,೦೦೦ ಮತ್ತು ಇಂಟರ್ನ್ಶಿಪ್ ಅವಕಾಶಗಳು.

ರಿಜಿಸ್ಟ್ರೇಷನ್ ಲಿಂಕ್:- https://dreamathon.dev

ಸ್ಪರ್ಧೆಯವಿಭಾಗಗಳು- ಹ್ಯಾಕಥಾನ್ನಲ್ಲಿ ಒಟ್ಟು ಎರಡು ವಿಭಾಗಗಳಿವೆ:

ಹ್ಯಾಕಥಾನ್ ಜೂನಿಯರ್ ಈ ವಿಭಾಗದಲ್ಲಿ ಹತ್ತನೇ ತರಗತಿಯಿಂದ ಪಿಯುಸಿ ವರೆಗಿನ ಯಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.

ಹ್ಯಾಕಥಾನ್ ಸೀನಿಯರ್ – ಈ ವಿಭಾಗದಲ್ಲಿ ೧೮ ವರ್ಷದಿಂದ ೨೪ ವರ್ಷದೊಳಗಿನ ಯಲ್ಲಾ ವಿದ್ಯಾರ್ಥಿಗಳು, ವೃತ್ತಿ ಪರರು ಮತ್ತು ಫ್ರೀಲಾನ್ಸ ಮಾಡುವವರು  ಭಾಗವಹಿಸಬಹುದು.

ಡ್ರೀಮಥಾನ್೨೦೧೯ನಲ್ಲಿ ಭಾಗವಹಿಸುವುದರಿಂದ ನಿಮಗೆ ಸಿಗುವ ಅವಕಾಶಗಳು: ಉತ್ತಮವಾಗಿ ಕೋಡ್ಮಾಡುವಂಥಹ ಕೋಡರ್ಗಳಿಗೆ ಉದ್ಯೋಗ ಅವಕಾಶಗಳು. ಬೆಸ್ಟ್ಕೋಡರ್ಗಳಿಗೆ ಇಂಟರ್ನ್ಶಿಪ್ ಅವಕಾಶಗಳು. ಪ್ರಾಡಕ್ಟ್ಡೆವಲಪ್ಮೆಂಟ್ಮಾರ್ಗದರ್ಶನ. ಮಂಗಳೂರಿನ ಕೋಡಿಂಗ್  ಕಮ್ಯೂನಿಟಿ ಭಾಗವಾಗುವ ಅವಕಾಶ. ಮಂಗಳೂರು ಮತ್ತು ಸುತ್ತಮುತ್ತಲಿನ ಕಂಪೆನಿ ಮತ್ತು ಸ್ಟಾರ್ಟ್ ಅಪ್ಗಳ ಟೆಕ್ಕೀಸ್ಗಳೊಂದಿಗೆ ಸಂವಾದ ನಡೆಸುವ ಅವಕಾಶ ಮತ್ತು ಟೆಕ್ ಸಂಬಂದಿ ವಿಷಯ ಹಾಗೂ ಸಲಹೆ ಪಡೆಯುವ ಅವಕಾಶ.

ನಮ್ಮಸಹಪ್ರಾಯೋಜಿಕರು: ನೈನ್, ಕರ್ನಾಟಕ ಸರ್ಕಾರಕೆ-ಟೆಕ್, ಕೋಡ್ಕ್ರಾಫ್ಟ್, ಪಿಕ್ಸಾಗ್ರಾಮ್ಮೆರ್, ಡಿಫರೆಂಟ್ಟೆಕ್ಸೊಲ್ಯೂಷನ್ಸ್, ಹೋಸ್ಟ್ಜೈರೋ, ಡಿಟಿ ಲ್ಯಾಬ್ಸ್, ಮ್ಯಾನ್ಫ್ರೇಮ್ಕಂಪ್ಯೂಟರ್ಸ್, ಇಸ್ಪೋರ್ಟ್ಸ್ ಅರೇನಾ, ಚಾಲೆಂಜರ್ಸ್ (challengers), ಪ್ಲಾಟೊನೊಮೆರ್ಸ್, ಮ್ಯಾಡ್ಟೈಟನ್.


Spread the love