ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯ ಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್

Spread the love

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್

ಮಂಗಳೂರು: ಋತುವಿನಲ್ಲಿ ಬದಲಾವಣೆ ಮತ್ತು ಬದಲಾಗುತ್ತಿರುವತಾಪಮಾನ ಸೊಳ್ಳೆಗಳಿಂದ ಬರುವ ರೋಗಗಳಿಗೆ ಕಾರಣವಾಗಿದೆ. ಮಲೇರಿಯ, ಲೆಪ್ಟೊಸ್ಪೈರೊಸಿಸ್ ಮತ್ತುಡೆಂಗ್ಯುನಂತಹ ಮಾರಕ ರೋಗಗಳಿಗೆ ಜನರುತುತ್ತಾಗುತ್ತಿದ್ದಾರೆ.ಈ ತೊಂದರೆಗಳು ಕೇವಲ ಮಾರಕವಾಗಿರುವುದಲ್ಲದೇತೀವ್ರ ಸ್ಥಿತಿಗಳಾದ ಮೂತ್ರಪಿಂಡ ವೈಫಲ್ಯ, ಪಿತ್ತಜನಕಾಂಗದಕಾರ್ಯಲೋಪರಕ್ತದಲ್ಲಿಅಸಾಧಾರಣತೊಂದರೆ ಮತ್ತು ಉಸಿರಾಟದ ಸಂಕೀರ್ಣ ತೊಂದರೆಗಳಿಗೆ ರೋಗಿಗಳು ಗುರಿಯಾಗುತ್ತಿದ್ದಾರೆ.ಕೆಎಂಸಿ ಆಸ್ಪತ್ರೆ ಮತ್ತುಅದರ ವೈದ್ಯರತಂಡಅತ್ಯಂತಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆಕರೆತರಲಾದಐವರಿಗೆ ನೂತನಜೀವನದ ಭರವಸೆ ನೀಡಿದೆ.
ಮೂತ್ರಪಿಂಡರೋಗತಜ್ಞಡಾ.ಮಯೂರ್ ವಿ ಪ್ರಭು, ತೀವ್ರನಿಗಾ ತಜ್ಞರಾದಡಾ.ದತ್ತಾತ್ರೇಯ ಪ್ರಭು, ಡಾ. ಸುಜಿತ್‍ರವೀಂದ್ರರಾಜ್, ಡಾ.ಮೇಘನಾ ಮಡಿ, ಡಾ.ಜಯೇಶ್‍ಕಾಮತ್ ಮತ್ತುರಕ್ತತಜ್ಞಡಾ. ಪ್ರಶಾಂತ್ ಭಟ್‍ಅವರನ್ನು ಒಳಗೊಂಡ ಸಮರ್ಥತಂಡಎಲ್ಲ ಸಾಧ್ಯವಾಗಬಹುದಾದ ಪ್ರಯತ್ನಗಳನ್ನು ಕೈಗೊಂಡು ಈ ಐದು ರೋಗಿಗಳಿಗೆ ಚಿಕಿತ್ಸೆ ನೀಡಿಅವರನ್ನು ಸ್ಥಿರ ಆರೋಗ್ಯ ಸ್ಥಿತಿಗೆ ತರುವುದಲ್ಲದೇ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಈ ಸಂದರ್ಭದಲ್ಲಿಘಟಕದ ಮುಖ್ಯಸ್ಥ ಸಾಗರ್ ಸಿದ್ದಿಕಿ, ಅವರು ಮಾತನಾಡಿ,ಕಡಲ ತೀರದದಕ್ಷಿಣಕನ್ನಡ ಮತ್ತುಕಾಸರಗೋಡು ಜಿಲ್ಲೆಗಳ ಇಂಥಪ್ರಕರಣಗಳು ಹೆಚ್ಚಿವೆ. ಬಹು ಸಂಕೀರ್ಣ ತೊಂದರೆಗಳನ್ನು ಹೊಂದಿದ್ದ ಅನೇಕ ರೋಗಿಗಳನ್ನು ತೀವ್ರ ನಿಗಾ ಮತ್ತು ವೆಂಟಿಲೇಟರ್‍ಗಳ ಆರೈಕೆಯಲ್ಲಿಡಬೇಕಿದೆ. ಐದು ರೋಗಿಗಳು ತೀವ್ರ ತುರ್ತುಸ್ಥಿತಿಯಲ್ಲಿದ್ದು ಸಂಕೀರ್ಣ ತೊಂದರೆಗಳು ಕಾಣಿಸಿಕೊಂಡಿದ್ದವು.ಡಯಾಲಿಸಿಸ್ ಅಗತ್ಯವಾಗುವ ಮೂತ್ರಪಿಂಡ ವೈಫಲ್ಯ, ಸೆಪ್ಟಿಸಿಮಿಯ ಇವುಗಳಲ್ಲಿ ಸೇರಿದ್ದವು. ವೈದ್ಯರಿಗೆಇದುತೀವ್ರಸವಾಲಾಗಿತ್ತು.ಆದರೆಅವರ ಬದ್ಧತೆಯಚಿಕಿತ್ಸೆಯಿಂದ ಈ ರೋಗಿಗಳ ಜೀವ ಉಳಿಸಿದ್ದಾರೆ ಎಂದರು.
ಕಣ್ಣೂರಿನ ಖಾಸಗಿ ಆಸ್ಪತ್ರೆಯಿಂದಕರೆತರಲಾದ 40 ವರ್ಷ ವಯಸ್ಸಿನ ಶಾಜಿತ್‍ಅಲೆಕ್ಸ್ ಸ್ಥಿತಿ ತೀವ್ರಗಂಭೀರವಾಗಿತ್ತು.ಅವರಿಗೆ ಬ್ಯಾಕ್ಟೀರಿಯಾ ಸೋಂಕಾದ ಲೆಪ್ಟೊಸ್ಪೈರೋಸಿಸ್ ಇರುವುದಾಗಿಗುರುತಿಸಲಾಗಿತ್ತು.ಪ್ಲೇಟ್‍ಲೆಟ್‍ಗಳ ಕಾರ್ಯಲೋಪ, ಮೂತ್ರಪಿಂಡಗಳ ವೈಫಲ್ಯ, ಉಸಿರಾಟದ ತೊಂದರೆಗಳ ತೀವ್ರ ಲಕ್ಷಣಗಳು ಅವರನ್ನುಕಾಡಿದ್ದವು.ರೋಗಿಕೋಮಾ ಸ್ಥಿತಿಯಲ್ಲಿದ್ದು ಅವರನ್ನುತಕ್ಷಣ ಡಯಾಲಿಸಿಸ್ ಮತ್ತು ವೆಂಟಿಲೇಟರ್‍ಗಳ ಕ್ರಮಕ್ಕೆಗುರಿಪಡಿಸಬೇಕಾಯಿತು.ಅಲ್ಲದೇಅವರಿಗೆ ಪಿತ್ತಜನಕಾಂಗದಕಾರ್ಯಲೋಪವಿದ್ದುಜೊತೆಗೆಪ್ಲೇಟ್‍ಲೆಟ್ ಮತ್ತುರಕ್ತದ ಉತ್ಪನ್ನಗಳ ಬೆಂಬಲ ನೀಡಿ, ಡಯಾಲಿಸಿಸ್‍ಗೆ ಗುರಿಪಡಿಸಲಾಯಿತು. ಅವರನ್ನುಡಾ.ಪ್ರಶಾಂತ್ ಭಟ್ ಹತ್ತಿರದಿಂದ ಗಮನಿಸಿದ್ದರು.ಕೆಲವು ದಿನಗಳ ನಂತರರೋಗಿ ಸಾಮಾನ್ಯ ಸ್ಥಿತಿಗೆ ಮರಳಿದ್ದರು.ಎರಡು ವಾರಗಳ ನಂತರಅವರಿಗೆ ವೆಂಟಿಲೇಟರ್ ಮತ್ತು ಡಯಾಲಿಸಿಸ್ ಬೆಂಬಲವನ್ನುತೆಗೆಯಲಾಯಿತು.ಅಲೆಕ್ಸ್‍ಗಮನಾರ್ಹಚೇತರಿಕೆಕಂಡುಕೊಂಡರಲ್ಲದೇ ನಂತರವಅವರನ್ನುಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‍ಡಾ.ಆನಂದ್ ವೇಣುಗೋಪಾಲ್‍ಅವರು ಮಾತನಾಡಿ, ಮಂಗಳೂರು ಒಳಗೆ ಮತ್ತು ಸುತ್ತ ಮುತ್ತ ಮಲೇರಿಯ ಮತ್ತುಡೆಂಗ್ಯು ಪ್ರಕರಣಗಳು ಬಹಳವಾಗಿವೆ.ಜ್ವರ, ಗಂಧೆಗಳು, ವಾಂತಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ಜನರುತಮ್ಮ ವೈದ್ಯರನ್ನು ಭೇಟಿಯಾಗುವಂತೆ ನಾನು ಒತ್ತಾಯಿಸುತ್ತೇನೆ. ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆ ಉತ್ಪಾದನೆಗೆಕಾರಣವಾಗುವ ನೀರು ನಿಲ್ಲದಂತೆ ನೋಡಿಕೊಳ್ಳಲು ಮತ್ತುಶುದ್ಧತೆಖಾತ್ರಿ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸಲಹೆ ನೀಡಲಾಗುತ್ತದೆಎಂದರು.
ಎರಡನೇ ಪ್ರಕರಣದಲ್ಲಿ 47 ವರ್ಷ ವಯಸ್ಸಿನ ಅಶೋಕ್ ಸುವರ್ಣಆರು ದಿನಗಳಿಂದ ಅಲ್ಪ ಪ್ರಮಾಣದಜ್ವರದಿಂದ ಬಳಲಿದ್ದರು.ಹುಬ್ಬಳ್ಳಿಯ ವೈದ್ಯರುಇದಕ್ಕೆಕಾರಣವನ್ನುಕಂಡುಹಿಡಿಯಲಾಗಿರಲಿಲ್ಲ. ತೀವ್ರ ಮೂತ್ರಪಿಂಡ ವೈಫಲ್ಯ ಕಾಣಿಸಿಕೊಂಡ ನಂತರಅವರ ಸ್ಥಿತಿ ಹದಗೆಟ್ಟುಗಂಭೀರವಾಗತೊಡಗಿತ್ತು.ಅವರನ್ನು ಕೆಎಂಸಿಯ ತೀವ್ರ ನಿಗಾ ಘಟಕಕ್ಕೆಕರೆತರಲಾಗಿತ್ತು.ಆಸ್ಪತ್ರೆಗೆ ಸೇರಿಸಿಕೊಂಡು ಐದು ನಿಮಿಷಗಳ ಒಳಗೆ ಅವರಿಗೆ ಹೃದಯಕ್ಕೆರಕ್ತ ಪೂರೈಕೆ ನಿಲ್ಲಿಸುವತೊಂದರೆಯಾದ ಕಾರ್ಡಿಯೋರೆಸ್ಪಿರೇಟರಿ ಅರೆಸ್ಟ್ ಕಾಣಿಸಿಕೊಂಡಿತ್ತು.ಸ್ಮøತಿತಪ್ಪಿದ ಸ್ಥಿತಿಯಲ್ಲಿರುವರನ್ನು ಪುನರುಜ್ಜೀವನಗೊಳಿಸುವ ರಿಸಸಿಟೇಷನ್ ಕ್ರಮಕ್ಕೆಅವರನ್ನು ಒಳಪಡಿಸಲಾಗಿತ್ತು.ಅವರಿಗೆ ಮೂತ್ಪಿಂಡವೈಫಲ್ಯವಿದ್ದರಿಂದಅವರಿಗೆ ದೀರ್ಘಕಾಲದ ಡಯಾಲಿಸಿಸ್ ಅಗತ್ಯವೂಇತ್ತು.ಇವರ ಪ್ರಕರಣವನ್ನು ಮೂತ್ರಪಿಂಡರೋಗತಜ್ಞಡಾ.ಮಯೂರ್ ವಿ.ಪ್ರಭು ಯಶಸ್ವಿಯಾಗಿ ನಿರ್ವಹಿಸಿದ್ದರು.ಅಶೋಕ್‍ಅವರುತಮ್ಮಜೀವಕ್ಕಾಗಿ ಬಹುತೇಕಒಂದು ಸಪ್ತಾಹ ಹೋರಾಟ ನಡೆಸಿದ್ದರು.ಅದೃಷ್ಟವಶಾತ್‍ಅವರುಚಿಕಿತ್ಸೆಗೆ ಸ್ಪಂದಿಸಿದ್ದರಲ್ಲದೇ ತಮ್ಮ ಈ ಸ್ಥಿತಿಯಿಂದ ಒಂದು ತಿಂಗಳಲ್ಲಿ ಹಂತ ಹಂತವಾಗಿ ಚೇತರಿಸಿಕೊಂಡಿದ್ದರು.ಅವರ ಮೂತ್ರಪಿಂಡ ಮತ್ತು ಪಿತ್ತಜನಕಾಂಗ ಕಾರ್ಯಗಳು ಸ್ಥಿರವಾಗಿದ್ದು ಸಾಮಾನ್ಯ ಸ್ಥಿತಿಗೆ ಮರಳಿದ್ದರು.ನಂತರಅವರು ಸಂತೋಷದಿಂದತಮ್ಮ ಸ್ವಂತಊರು ಹುಬ್ಬಳ್ಳಿಗೆ ಹಿಂತಿರುಗಿದ್ದರು.


Spread the love