ಮಂಗಳೂರಿನಲ್ಲಿ 5 ರಂದು ಜಾವೆದ್ ಅಲಿ ಗಾಯನ

ಮಂಗಳೂರು: ಖ್ಯಾತ ಬಾಲಿವುಡ್ ಗಾಯಕ ಜಾವೆದ್ ಅಲಿ ಈ ತಿಂಗಳ 5ರಂದು ನಗರದ ಫೋರಂ ಫಿಜಾ ಮಾಲ್‍ನಲ್ಲಿ ಸಾರ್ವಜನಿಕರಿಗೆ ಹಿಂದಿ ಚಿತ್ರಗೀತೆಗಳ ರಸದೌತಣ ಉಣಬಡಿಸಲಿದ್ದಾರೆ.
ಏಕ್ ದಿನ್ ತೇರಿ ರಾಹೋನ್ ಮೈನ್, ಜಶ್ನ್-ಎ-ಬಹಾರ, ಗುಝಯಿಷ್ ಅರ್ಝಿಯಾನ್, ಕುನ್ ಫಯಾ ಕುನ್ ಸೇರಿದಂತೆ ಬಾಲಿವುಡ್‍ನ ಹಲವು ಹಿಟ್‍ಗಳ ಗಾಯಕ ಅಂದು ಸಂಜೆ 6ಗಂಟೆಯಿಂದ ರಸಮಂಜರಿ ನಡೆಸಿಕೊಡಲಿದ್ದಾರೆ. ಈ ಅಪೂರ್ವ ಸಂಗೀತ ರಸಮಂಜರಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದು ಪ್ರಕಟಣೆ ಹೇಳಿದೆ.

Leave a Reply

Please enter your comment!
Please enter your name here