ಮಂಗಳೂರು: ಅಕ್ರಮ ಮರ ಸಾಗಾಟ: ಸೊತ್ತು ವಶಕ್ಕೆ

ಮಂಗಳೂರು: ಮಿತ್ತಕೋಡಿ ಎಂಬಲ್ಲಿ ಅಕ್ರಮವಾಗಿ ಕಿರಾಲ್‌ ಬೋಗಿ ಜಾತಿಯ ಮರದ 31 ದಿಮ್ಮಿ ಹಾಗೂ 17 ಕಂಬಗಳನ್ನು ಲಾರಿ ಮೂಲಕ ಸಾಗಾಟ ಮಾಡುತ್ತಿದ್ದುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

illigal-wooden-log-raid

ವಾಹನವು ಬೆಳ್ತಂಗಡಿ ಪಡಂಗಡಿಯ ಬಾಲಕೃಷ್ಣ ಶೆಟ್ಟಿಯವರ ಮಾಲಕತ್ವದಲ್ಲಿದ್ದು, ಲಾರಿ ಚಾಲಕ ಸಿದ್ದೀಕ್‌ ಎಂಬಾತನನ್ನು ಬಂಧಿಸಿದ್ದಾರೆ. ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್‌ ಮತ್ತು ಸಿಬ್ಬಂದಿಯರಾದ ಉಪ ವಲಯ ಅರಣ್ಯಾಧಿಕಾರಿ ಬಿ. ಜಗರಾಜ್‌, ರವಿ ಕುಮಾರ್‌, ಅರಣ್ಯ ರಕ್ಷಕ ಜಿತೇಶ್‌ ಪಿ., ಸುಕುಮಾರ್‌, ಅರಣ್ಯ ವೀಕ್ಷಕ ದೇವದಾಸ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣದ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕ ಶ್ರೀಧರ್‌ ನಾಯ್ಕ ನಡೆಸುತ್ತಿದ್ದಾರೆ.

Leave a Reply

Please enter your comment!
Please enter your name here