ಮಂಗಳೂರು: ಅತ್ಯಾಧುನಿಕ ಆಂಬ್ಯುಲೆನ್ಸ್ ಸೇವೆ ಮತ್ತು ತುರ್ತು ಸಂಖ್ಯೆಯನ್ನು ಆರಂಭಿಸಲಿರುವ ಕೆಎಂಸಿ ಆಸ್ಪತ್ರೆ

ಮಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ತನ್ನ ವಿಸ್ತಾರವಾದ ಜಾಲದ ಆಂಬ್ಯುಲೆನ್ಸ್ ಸೇವೆ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸರ್ವೀಸ್(ಎಂಎಆರ್‍ಎಸ್-ಮಾರ್ಸ್) ಮತ್ತು ತುರ್ತು ಸಂಖ್ಯೆ 0824 2222 227 ಆರಂಭವನ್ನು ಪ್ರಕಟಿಸಿದೆ. ಎಲ್ಲ ವೈದ್ಯಕೀಯ ತುರ್ತು ಅಗತ್ಯಗಳನ್ನು ಇದು ಪೂರೈಸಲಿದ್ದು ಜೀವಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಧಿಕೃತವಾಗಿ ಈ ಸೇವೆ ಶುಕ್ರವಾರ, 26, ಜೂನ್‍ರಂದು ಕರ್ನಾಟಕ ರಾಜ್ಯದ ಗೌರವಾನ್ವಿತ ಆರೋಗ್ಯ ಸಚಿವ ಯು. ಟಿ. ಖಾದರ್, ಪೊಲೀಸ್ ಸಂಚಾರ ವಿಭಾಗದ ಸಹಾಯಕ ಆಯುಕ್ತ ಉದಯ್ ಎಂ. ನಾಯಕ್, ಪೊಲೀಸ್ ಸೂಪರಿಂಟೆಂಡೆಂಟ್ ಡಾ. ಶರಣಪ್ಪ.
ತುರ್ತು ಸಂದರ್ಭದಲ್ಲಿ ಸಂಪೂರ್ಣ ನಿರೀಕ್ಷಣೆಯಡಿ ರೋಗಿಯ ಸಾಗಣೆ ಸೌಲಭ್ಯವನ್ನು ಮಾರ್ಸ್ ಪೂರೈಸಲಿದೆ. ಈ ಸೇವೆ ಸುವರ್ಣ ಗಂಟೆಯ ಅವಧಿಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ಸಮುದಾಯಕ್ಕೆ ಸಹಾಯ ಮಾಡಲಿದೆ. ವೈದ್ಯಕೀಯ ತೊಂದರೆ ಅಥವ ತುರ್ತು ಸಂದರ್ಭದಲ್ಲಿ ರೋಗಿಗಳು 2222 227 ಕ್ಕೆ ಕರೆ ಮಾಡಬಹುದು. ಅವರಿಗೆ ಕೆಎಂಸಿ ಆಸ್ಪತ್ರೆಯ ತರಬೇತಿ ಹೊಂದಿದ ವೈದ್ಯಕೀಯ ಪ್ರತಿನಿಧಿಗಳು ಅತ್ಯಂತ ಕಡಿಮೆ ಅವದಿಯಲ್ಲಿ ಸೇವೆ ಸಲ್ಲಿಸುವರು.
ಹೆಚ್ಚುವರಿಯಾಗಿ ಮಾರ್ಸ್ ಆರಂಭವಲ್ಲದೆ(ನಾಲ್ಕು ಆಂಬ್ಯುಲೆನ್ಸ್‍ಗಳು) ಕೆಎಂಸಿ ಚಿಕ್ಕಮಗಳೂರು, ಮಡಿಕೇರಿ, ಉಡ್ಡಾನೆ, ಕುಂಬ್ಳೆ, ಕಾಸರ್‍ಗೋಡು, ಕಾನಂಗಡ್, ಪರಿಯಾರಂ, ಥಲ್ಲಿಪರಂಬ, ಕಣ್ಣೂರ್ ಮುಂತಾದ ಕಡೆಗಳಲ್ಲಿನ 13 ಇತರೆ ಆಂಬ್ಯುಲೆನ್ಸ್‍ಗಳೊಂದಿಗೆ ಪಾಲುದಾರಿಕೆ ಹೊಂದಲಿದ್ದು ಮಾರ್ಸ್ ಕನೆಕ್ಟ್ ಎಂಬ ಸೇವೆಯಡಿ ಹೆಚ್ಚಿನ ಸಂಖ್ಯೆಯ ಆಂಬ್ಯುಲೆನ್ಸ್‍ಗಳ ಸೇವೆಯನ್ನು ಸಾದರಪಡಿಸಲಾಗುವುದು.
ಕೇಂದ್ರೀಕೃತ ದಿನಕ್ಕೆ 24 ಗಂಟೆಯ ಹಾಗೂ ವಾರಕ್ಕೆ 7 ದಿನಗಳೂ ಕಾರ್ಯನಿರ್ವಹಿಸುವ ಕಾಲ್‍ಸೆಂಟರ್ ಮತ್ತು ಉತ್ತಮವಾದ ತರಬೇತಿ ಹೊಂದಿರುವ ತುರ್ತು ಪ್ರತಿಕ್ರಿಯಾ ಕೇಂದ್ರದ ವೈದ್ಯರು ತುರ್ತು ಕರೆಗಳಿಗೆ ಉತ್ತರಿಸಿ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡುತ್ತಾರೆ. ಎಲ್ಲಾ ಆಂಬ್ಯುಲೆನ್ಸ್ ಚಾಲಕರಿಗೆ ಮೂಲ ಜೀವ ಬೆಂಬಲದ ಕಾರ್ಯಕ್ರಮಗಳಲ್ಲಿ ತರಬೇತಿ ನೀಡುವುದರಿಂದ ಅವರು ವಯಸ್ಕರು ಮತ್ತು ಮಕ್ಕಳ ಆರೋಗ್ಯ ತುರ್ತು ಸ್ಥಿತಿಗಳನ್ನು ನಿಭಾಯಿಸಬಲ್ಲವರಾಗಿರುತ್ತಾರೆ. ಏರ್‍ಕಂಡೀಷನರ್ ಮತ್ತು ಉನ್ನತ ಹೃದಯ ಚಿಕಿತ್ಸೆಯ ಜೀವ ಬೆಂಬಲ ವ್ಯವಸ್ಥೆಯೊಂದಿಗೆ ಈ ಆಂಬ್ಯುಲೆನ್ಸ್‍ಗಳು ಸಜ್ಜಾಗಿದ್ದು ಇದರಿಂದ ಆಸ್ಪತ್ರೆ ತಲುಪುವ ಮುನ್ನವೇ ರೋಗಿಗಳಿಗೆ ಆಂಬ್ಯುಲೆನ್ಸ್‍ನಲ್ಲಿಯೇ ಚಿಕಿತ್ಸೆ ಆರಂಭವಾಗುವುದಾದೆ.
ನಮ್ಮ ವಿಶೇಷತೆಗಳಲ್ಲಿ ಒಂದಾಗಿರುವ ರೋಗಿ ಕೇಂದ್ರೀಕೃತ ಕಾರ್ಯದ ವಿಸ್ತರಣೆಯಾಗಿ ವೈದ್ಯಕೀಯ ಸೇವೆಯನ್ನು ಅಳವಡಿಸಲಾಗಿದೆ. ರೋಗಿಗಳಿಗೆ ಹೆಚ್ಚು ಉತ್ತಮವಾಗಿ ಸೇವೆ ಸಲ್ಲಿಸಲು ಮಾರ್ಸ್ ನಮಗೆ ಸಹಾಯ ಮಾಡುವುದಲ್ಲದೆ ಆಂಬ್ಯುಲೆನ್‍ನಲ್ಲಿಯೇ ಹೆಚ್ಚುವರಿ ವೈದ್ಯಕೀಯ ಸೇವೆಗಳ ಸೌಲಭ್ಯ ಲಭಿಸುವಂತೆ ಮಾಡುತ್ತದೆ. ತುರ್ತು ಸ್ಥಿತಿಗಳಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ತುರ್ತು ಸಂಖ್ಯೆ ನಿರ್ದೇಶನಗಳನ್ನು ನೀಡುವುದಲ್ಲದೆ ರೋಗಿಯನ್ನು ನಮ್ಮ ವಿಶ್ವಮಟ್ಟದ ತುರ್ತು ಸೇವೆಗೆ ರವಾನಿಸುವ ಮುನ್ನ ಹೆಚ್ಚುವರಿ ಅವಧಿಯನ್ನು ಅದು ಪೂರೈಸುತ್ತದೆ ಎಂದು ಕೆಎಂಸಿ ಆಸ್ಪತ್ರೆಯ ಘಟಕದ ಮುಖ್ಯಸ್ಥ ಸಾಹೀರ್ ಸಿದ್ಧಿಖಿ ಹೇಳಿದರು.
ವೈದ್ಯಕೀಯ ತುರ್ತು ಸ್ಥಿತಿ ಸಂದರ್ಭದಲ್ಲಿ ಸಮಯ ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ಕ್ಷಿಪ್ರ ಕಾರ್ಯ, ನಿಖರವಾದ ಚಿಕಿತ್ಸೆಯನ್ನು ರೋಗಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿಯೇ ನೀಡುವುದು ಅತ್ಯಂತ ಮುಖ್ಯವಾಗಿರುತ್ತದೆ ಅಲ್ಲದೆ ಉತ್ತಮ ಫಲಿತಾಂಶಗಳನ್ನು ಹೆಚ್ಚಿಸಲು ಇದು ನೆರವಾಗುತ್ತದೆ. ಮಾರ್ಸ್‍ನ ಸಂಪೂರ್ಣ ವೈದ್ಯಕೀಯ ತುರ್ತು ಪರಿಹಾರಗಳು ಅತ್ಯಂತ ಉನ್ನತವಾದ ಸಮಗ್ರ ಸೇವೆ ಮತ್ತು ರೋಗಿಯ ಸಾಗಣೆಯ ಸೌಲಭ್ಯವನ್ನು ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ನೀಡುತ್ತದೆ. ಎಎಲ್‍ಎಸ್ ಮತ್ತು ಬಿಎಲ್‍ಎಸ್ ಆಂಬ್ಯುಲೆನ್ಸ್‍ಗಳು ನಗರದ ಪ್ರಮುಖ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಇರುತ್ತವೆ ಅಲ್ಲದೆ ತೊಂದರೆಯಲ್ಲಿರುವ ರೋಗಿಗಳಿಗೆ ನರವಾಗಲಿವೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ|| ಆನಂದ್ ವೇಣುಗೋಪಾಲ್ ಹೇಳಿದರು.
ಮಾರ್ಸ್ ಏಕೆ ಪ್ರತ್ಯೇಕವಾಗಿದೆ?
• ಕೇಂದ್ರೀಕೃತ 24 x 7 ಕಾಲ್ ಸೆಂಟರ್ ಮತ್ತು ಉತ್ತಮ ತರಬೇತಿ ಹೊಂದಿರುವ ವೈದ್ಯರು ತುರ್ತು ವೈದ್ಯಕೀಯ ತಂತ್ರಜ್ಞರಿಗೆ ಸಲಹೆ ನೀಡುತ್ತಾರೆ.
• ಕರೆ ಮಾಡುವವರು/ ಅಟೆಂಡರ್‍ಗಳು/ ರೋಗಿಯ ಸಂಬಂಧಿಗಳಿಗೆ ತುರ್ತು ವೈದ್ಯಕೀಯ ತಂತ್ರಜ್ಞರು ಅಥವಾ ಕಾಲ್‍ಸೆಂಟರ್‍ನಿಂದ ಸಲಹೆ.
• ತುರ್ತು ವೈದ್ಯಕೀಯ ತಂತ್ರಜ್ಞರು/ ಚಾಲಕರಿಗೆ ಮೂಲ ಜೀವ ಬೆಭಲ ಕಾರ್ಯದಲ್ಲಿ ತರಬೇತಿಯಿದ್ದು ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳ ತುರ್ತು ಸ್ಥಿತಿಗಳನ್ನು ನಿಭಾಯಿಸಬಲ್ಲರು.
• ಸಂಪೂರ್ಣ ಏರ್ ಕಂಡೀಷನ್ಡ್ ಉತ್ತಮವಾಗಿ ಸಜ್ಜಾದ ಎಸಿಎಲ್‍ಎಸ್(ಉನ್ನತ ಹೃದಯ ಜೀವ ಬೆಂಬಲ) ಆಂಬ್ಯುಲೆನ್ಸ್‍ಗಳು ಮತ್ತು ಬಿಎಸ್‍ಎಸ್ ಆಂಬ್ಯುಲೆನ್ಸ್‍ಗಳು.
• ಗಂಭೀರ ಸಂದರ್ಭಗಳಲ್ಲಿ ಅಗತ್ಯವಿರುವ ಔಷಧಗಳು, ವೆಂಟಿಲೇಟರ್/ ಡಿಫೈಬ್ರಿಲ್ಲೇಟರ್/ ಸಿರೆಂಜ್ ಪಂಪ್ ಮುಂತಾದವುಗಳೊಂದಿಗೆ ಎಸಿಎಲ್‍ಎಸ್ ಆಂಬ್ಯುಲೆನ್ಸ್‍ಗಳು ಸಜ್ಜಾಗಿರುತ್ತವೆ.
• ಬಿಎಲ್‍ಎಸ್ ಆಂಬ್ಯುಲೆನ್ಸ್‍ಗಳಲ್ಲಿ ಇನ್‍ಬ್ಯುಲ್ಟ್ ಇಸಿಜಿ ಯಂತ್ರಗಳು/ ಸಕ್ಷನ್ ಆಪರೇಟಸ್/ ಗ್ಲೂಕೋ ಮೀಟರ್ ಮುಂತಾದವುಗಳನ್ನು ರೋಗಿ ಸ್ಥಿ ತಿಳಿದುಕೊಳ್ಳುವುದಕ್ಕಾಗಿ ಅಳವಡಿಸಲಾಗಿದೆ.
• ತುರ್ತು ಪ್ರತಿಕ್ರಿಯಾ ಕೇಂದ್ರಕ್ಕೆ ರೋಗಿಯ ಸ್ಥಿ ಕುರಿತ ಚಿತ್ರಗಳನ್ನು ರವಾನಿಸಲು ಆಂಬ್ಯುಲೆನ್ಸ್‍ಗಳಲ್ಲಿ ಕೇಂದ್ರ ನಿರೀಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
• ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅಗತ್ಯ ಇರುವಲ್ಲಿ ವೈದ್ಯರನ್ನು ಸ್ಥಳಕ್ಕೇ ಕಳುಹಿಸಲಾಗುವುದು.
ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಕುರಿತು :
ಎಂಎಚ್‍ಇಪಿಎಲ್ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಂಗವಾಗಿದೆ. ಮುಂಚೂಣಿಯ ಆಸ್ಪತ್ರೆ ಜಾಲವನ್ನು ಮಣಿಪಾಲ್ ಹಾಸ್ಪಿಟಲ್ಸ್ ಹೆಸರಲ್ಲಿ ನಡೆಸುತ್ತಿದೆ. ಎಂಎಚ್‍ಇಯು ಭಾರತದ 6 ರಾಜ್ಯಗಳ 13 ಸ್ಥಳಗಳಲ್ಲಿ ಹಾಗೂ ಮಲೇಷಿಯಾದ ಕ್ಲಾಂಗ್‍ನಲ್ಲಿನ ಒಂದು ಆಸ್ಪತ್ರೆಯೂ ಸೇರಿದಂತೆ ಒಟ್ಟು 16 ಆಸ್ಪತ್ರೆಗಳಲ್ಲಿ ಸುಮಾರು 5200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಪ್ರಾಥಮಿಕ ಹಂತದಿಂದ ನಾಲ್ಕನೇ ಉನ್ನತ ಹಂತದ ಆರೈಕೆವರೆಗಿನ ಎಲ್ಲಾ ಚಿಕಿತ್ಸೆಗಳನ್ನು ಈ ಆಸ್ಪತ್ರೆಗಳ ಜಾಲ ಪೂರೈಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಸಂಸ್ಥೆ 2000ಕ್ಕೂ ಹೆಚ್ಚಿನ ವೈದ್ಯರು ಮತ್ತು 6000ಕ್ಕೂ ಹೆಚ್ಚಿನ ದಾದಿಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ತಂಡವನ್ನು ಅಭಿವೃದ್ಧಿಪಡಿಸಿದ್ದು ಇವರು ಬದ್ಧತೆವುಳ್ಳವರಾಗಿದ್ದು ವೈದ್ಯಕೀಯ ಉತ್ಕøಷ್ಟತೆ ಹಾಗೂ ರೋಗಿ ಕೇಂದ್ರೀಕೃತ ನೀತಿಯುತ ಅಭ್ಯಾಸಗಳ ಮೌಲ್ಯಗಳಿಗೆ ಬದ್ಧತೆ ಹೊಂದಿದ್ದಾರೆ. ಇದರೊಂದಿಗೆ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೋಗ್ಯ ಶುಶ್ರೂಷೆಯನ್ನು ಪೂರೈಸುತ್ತಿದ್ದಾರೆ.
ಮಣಿಪಾಲ್ ಹಾಸ್ಪಿಟಲ್ಸ್ ಕುರಿತು :-
ಆರೋಗ್ಯ ಶುಶ್ರೂಷೆ ಕ್ಷೇತ್ರದಲ್ಲಿ ಆದ್ಯಪ್ರವರ್ತಕರಾದ ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಅತ್ಯಂತ ದೊಡ್ಡದಾದ ಆಸ್ಪತ್ರೆಗಳ ಜಾಲವಾಗಿದ್ದು ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚಿನ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಕೈಗೆಟಕುವ ರೀತಿಯಲ್ಲಿ ಮೂರನೇ ಉನ್ನತ ಹಂತದ ಬಹುವಿಶೇಷತೆಯ ಆರೋಗ್ಯ ಶುಶ್ರೂಷೆ ಚೌಕಟ್ಟನ್ನು ಅಭಿವೃದ್ಧಿ ಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು ತನ್ನ ಎಲ್ಲಾ ಬಹುವಿಶೇಷತೆಯ ಪೂರೈಕೆ ಶ್ರೇಣಿಯ ಮೂಲಕ ಈ ಕ್ರಮವನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಜೊತೆಗೆ ಈ ಸೇವೆಯನ್ನು ಗೃಹ ಆರೈಕೆಗೆ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಮುಖ ನಾಲ್ಕನೇ ಉನ್ನತ ಹಂತದ ಆರೈಕೆಯ ಸೌಲಭ್ಯವನ್ನು ಸಂಸ್ಥೆ ಹೊಂದಿದ್ದು 8 ಮೂರನೇ ಉನ್ನತ ಹಂತದ ಆರೈಕೆಯ, 7 ಎರಡನೇ ಹಂತದ ಆರೈಕೆಯ ಮತ್ತು 2 ಪ್ರಾಥಮಿಕ ಹಂತದ ಆರೈಕೆಯ ಕ್ಲಿನಿಕ್‍ಗಳನ್ನು ಭಾರತ ಮತ್ತು ವಿದೇಶದಾದ್ಯಂತ ಸಂಸ್ಥೆ ಹೊಂದಿದ್ದು ಮಣಿಪಾಲ್ ಹಾಸ್ಪಿಟಲ್ಸ್ ಯಶಸ್ವಿಯಾಗಿ 5,200ಕ್ಕೂ ಹೆಚ್ಚಿನ ಹಾಸಿಗೆಗಳನ್ನು ನಿರ್ವಹಿಸುತ್ತಿದೆ. ಮಣಿಪಾಲ್ ಹಾಸ್ಪಿಟಲ್ಸ್ ಸಮಗ್ರ ಗುಣಪಡಿಸುವ ಮತ್ತು ರೋಗವನ್ನು ತಡೆಯುವ ಆರೈಕೆಯನ್ನು ವಿಶ್ವದ ಎಲ್ಲೆಡೆಯ ರೋಗಿಗಳಿಗೆ ನೀಡುತ್ತಿದೆ. ವೈದ್ಯಕೀಯ ಸಂಶೋಧನಾ ಚಟುವಟಿಕೆಗಳಲ್ಲಿ ನೀತಿಯ ಮಟ್ಟಕ್ಕಾಗಿ ಎಎಎಚ್‍ಆರ್‍ಪಿಪಿ ಸಂಸ್ಥೆ ಮಾನ್ಯತೆಯನ್ನು ಮಣಿಪಾಲ್ ಹಾಸ್ಪಿಟಲ್ಸ್‍ಗೆ ನೀಡಿದೆ. ಎನ್‍ಎಬಿಎಲ್, ಎನ್‍ಎಬಿಎಚ್ ಮತ್ತು ಐಎಸ್‍ಒ ಮಾನ್ಯತೆಗಳನ್ನೂ ಈ ಸಂಸ್ಥೆ ಪಡೆದಿರುತ್ತದೆ. ಮಣಿಪಾಲ್ ಹಾಸ್ಪಿಟಲ್ಸ್ ಭಾರತದಲ್ಲಿ ಅತ್ಯಂತ ಗೌರವಾನ್ವಿತ ಆಸ್ಪತ್ರೆ ಕಂಪನಿಯಾಗಿದ್ದು ಗ್ರಾಹಕ ಸಮೀಕ್ಷೆಯ ಪ್ರಕಾರ ಅತ್ಯಂತ ಹೆಚ್ಚು ರೋಗಿಗಳನ್ನು ಶಿಫಾರಸ್ಸು ಮಾಡಲಾಗುವ ಆಸ್ಪತ್ರೆಯಾಗಿದೆ.
ಸಂಪಾದಕೀಯ ವಿವರಗಳಿಗಾಗಿ ಸಂಪರ್ಕಿಸಿ.: ಕವಿತಾ ಕಿಣಿ, ವೆಬರ್ ಶ್ಯಾಂಡ್‍ವಿಕ್, ಮೊಬೈಲ್ : +91 9886571641, ಇಮೇಲ್ : kkini@webershandwick.com

ಅಂಜನಾ ಚಂದ್ರನ್, ಮಣಿಪಾಲ್ ಹೆಲ್ತ್ ಎಂಟರ್‍ಪ್ರೈಸಸ್, ಮೊಬೈಲ್ : +91 9886278400. ಇಮೇಲ್:

anjana.chandran@manipalhospitals.com

Leave a Reply