ಮಂಗಳೂರು: ಅನೈತಿಕ ಗೂಂಡಾಗಿರಿಯಿಂದ ಜಿಲ್ಲೆಯ ಸಚಿವ ಶಾಸಕರನ್ನು ಬೆತ್ತಲೆಗೊಳಿಸಿದೆ : ಫಿಎಫ್ ಐ

ಮಂಗಳೂರು: ನಗರದ ಅತ್ತಾವರದಲ್ಲಿ ಮುಸ್ಲಿಂ ಸಮುದಾಯದ ಯುವಕನ ಮೇಲೆ ನಡೆದ ಅನೈತಿಕ ಗೂಂಡಾಗಿರಿಯಿಂದ ಯುವಕ ಬೆತ್ತಲೆಗೊಂಡಿಲ್ಲ. ಬದಲಾಗಿ ಜಿಲ್ಲೆಯ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾದರ್‌, ಶಾಸಕ ಜೆ.ಆರ್‌. ಲೋಬೊ ಅವರನ್ನು ಬೆತ್ತಲೆಗೊಳಿಸಲಾಗಿದೆ ಪಿಎಫ್ಐ ದಕ್ಷಿಣಕನ್ನಡ ಘಟಕದ ಅಧ್ಯಕ್ಷ ಹನೀಫ್ ಖಾನ್ ಕೋಡಾಜೆ ಹೇಳಿದ್ದಾರೆ.

17-PFI-protest-20150826-016 13-PFI-protest-20150826-012 10-PFI-protest-20150826-009

ಅವರು ಬುಧವಾರ ಕೆಎಂಸಿ ಬಳಿ ಯುವಕನೊಬ್ಬನ ಮೇಲೆ ನಡೆದ ಅನೈತಿಕ ಗೂಂಡಾಗಿರಿ ವಿರೋ ಧಿಸಿ ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು, ಇಂತಹ ಕ್ರತ್ಯಗಳ ತಡೆಗೆ ಪೋಲಿಸರು ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಇಂತಹ ವಿಚಾರದಲ್ಲಿ ಸಮಾನತೆಯನ್ನು ಪ್ರತಿಪಾದಿಸಬೇಕು ಎಂದು ಆಗ್ರಹಿಸಿದರು.
ಉಡುಪಿಯ ಧರ್ಮಪ್ರಾಂತ್ಯದ ಅಂತರ್‌ ಧರ್ಮೀಯ ಸಂವಾದದ ನಿರ್ದೇಶಕ ಫಾದರ್‌ ವಿಲಿಯಂ ಮಾರ್ಟಿಸ್‌ ಮಾತನಾಡಿ, ನಮ್ಮ ಆಹಾರ ಸಂಸ್ಕೃತಿಯನ್ನು ಬದಲಾಯಿಸುವ ಅಧಿಕಾರ ಇತರ ಧರ್ಮಿಯರಿಗಿಲ್ಲ ಎಂದರು.
ಪಿಎಫ್ಐರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್‌ ಹನೀಫ್ ಮಾತನಾಡಿ, ಯುವಕನೊಬ್ಬನ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿರುವುದು ಅಮಾನವೀಯ ಕೃತ್ಯವಾಗಿದ್ದು, ಇದನ್ನು ಪಿಎಫ್ಐಖಂಡಿಸುತ್ತದೆ ಎಂದರು.
ಪಿಎಫ್ಐರಾಜ್ಯ ಕಾರ್ಯದರ್ಶಿ ಬೆಳ್ಳಾರಿ, ಮಾಜಿ ಮೇಯರ್‌ ಅಶ್ರಫ್ ಮತ್ತಿತರರು ಮಾತನಾಡಿದರು. ಆನಂದ್‌ ಮಿತ್ತಬೈಲು, ಮುಹಮ್ಮದ್‌ ಶರೀಫ್, ಆಲಂ, ಶಂಸುದ್ದೀನ್‌, ಟಿ.ಎಸ್‌. ಹನೀಫ್, ಸಲೀಂ ಇತರರು ಉಪಸ್ಥಿತರಿದ್ದರು.

Leave a Reply