ಮಂಗಳೂರು: ಅಪಘಾತಕ್ಕೀಡಾದ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೇರೆದ ಯು ಟಿ ಖಾದರ್

ಮಂಗಳೂರು: ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಹೊರಳಾಡುತ್ತಿದ್ದ ದಂಪತಿಯನ್ನು ಆರೋಗ್ಯ ಸಚಿವ ಯುಟಿ ಖಾದರ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ರಾಜ್ಯದ ಆರೋಗ್ಯ ಸಚಿವ ಯುಟಿ ಖಾದರ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಹೊರಳಾಡುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಗುರುವಾರ ದೇರಳಕಟ್ಟೆಯಲ್ಲಿ ನಡೆದಿದೆ.

ಯು.ಟಿ.ಖಾದರ್ ಗುರುವಾರ ತನ್ನ ಸ್ವಕ್ಷೇತ್ರ ಉಳ್ಳಾಲದ ಸುತ್ತಮುತ್ತದಲ್ಲಿ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ದೇರಳಕಟ್ಟೆಯ ರಸ್ತೆ ಮಧ್ಯೆ ಗುಂಪು ಸೇರಿತ್ತು.

ಇದನ್ನು ನೋಡಿದ ಸಚಿವ ಖಾದರ್ ತಕ್ಷಣ ಕಾರಿನಿಂದ ಇಳಿದು ರಸ್ತೆಯಲ್ಲಿ ಬೈಕ್‍ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದ ಕೋಣಾಜೆ ಸಮೀಪದ ಜೇಮ್ಸ್(55) ಹಾಗೂ ಅವರ ಪತ್ನಿ ಸೂಜಾನ್(52)ದಂಪತಿ ನೋಡಿದ್ದಾರೆ. ಕಾಲಿಗೆ ಗಂಭೀರ ಗಾಯಗಳಾಗಿ ರಸ್ತೆಯಲ್ಲಿ ಹೊರಳಾಡುತ್ತಿದ್ದನ್ನು ನೋಡಿದ ಸಚಿವರು ಕೂಡಲೇ ತನ್ನ ಕಾರಿನಲ್ಲಿ ದಂಪತಿಯನ್ನು ಕುಳ್ಳಿರಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಯುಟಿ ಖಾದರ್ ಈ ರೀತಿ ಮಾನವೀಯತೆ ತೋರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಅಪಘಾತಕ್ಕೀಡದವರನ್ನು ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

Leave a Reply