ಮಂಗಳೂರು: ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯೋರ್ವರ ನಗ ನಗದು ಲೂಟಿ

ಮಂಗಳೂರು : ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಅವರಲ್ಲಿದ್ದ ನಗ ನಗದನ್ನು ದೋಚಿಕೊಂಡು ಪರಾರಿಯಾದ ಘಟನೆ ಬಜಾಲ್ ರೈಲ್ವೆ ಕ್ರಾಸ್ ಬಳಿ ನವೆಂಬರ್ 15 ರಂದು ನಡೆದಿದೆ

ಘಟನೆಯ ವಿವರ ನವೆಂಬರ್ 15 ರಂದು ಭುರರಾಮ್ ಮತ್ತು ಅವರ ಸ್ನೇಹಿತರು KA-21 N-6721ನೇ ನಂಬ್ರದ  ಸ್ಕಾರ್ಪಿಯೊ ಜೀಪಿನಲ್ಲಿ  ಮುಂಜಾವ 03.10 ಗಂಟೆಗೆ ಬಜಾಲ್‌ ರೈಲ್ವೇ ಕ್ರಾಸ್‌ ಬಳಿ ತಲುಪಿದಾಗ ನಾಲ್ಕು ಜನ ಅಪರಿಚಿತರು ಅಡ್ಡಗಟ್ಟಿ  ಸದ್ರಿ ನಾಲ್ವರ ಪೈಕಿ ಒಬ್ಬನು ಪಿಸ್ತೂಲ್‌ ನ್ನು ಇನ್ನೂ ಮೂವರು ಚೂರಿಗಳನ್ನು ಫಿರ್ಯಾದಿ ಮತ್ತು ಅವರ ಸ್ನೇಹಿತರಿಗೆ ತೋರಿಸಿ ನಗದು ಹಣ ಹಾಗೂ ಮೊಬೈಲ್‌ ಫೋನ್‌ ಗಳನ್ನು ಭಲತ್ಕಾರವಾಗಿ ಸುಲಿಗೆ ಮಾಡಿದ್ದಲ್ಲದೇ, ಡಿಕ್ಕಿಯಲ್ಲಿದ್ದ ಫಿರ್ಯಾದಿ ಹಾಗೂ ಅವರ ಸ್ನೇಹಿತರ ಬ್ಯಾಗ್‌ ಮತ್ತು ಅದರಲ್ಲಿದ್ದ ನಗದು ಹಣ ಹಾಗೂ ಇತರ ಬೆಲೆ ಬಾಳುವ ಸ್ವತ್ತುಗಳನ್ನು ಸುಲಿಗೆ ಮಾಡಿ ಕೊಂಡೊಯ್ದಿದ್ದು, ಆರೋಪಿಗಳು ಸುಲಿಗೆ ಮಾಡಿದ ಒಟ್ಟು ನಗದು ಹಣ 1,30,100/-ರೂ. ಆಗಿದ್ದು, ಇತರ ಸ್ವತ್ತುಗಳ ಮೌಲ್ಯ 1,44,000/-ರೂ ಆಗಿದ್ದು, ಆರೋಪಿಗಳು ಸುಲಿಗೆ ಮಾಡಿದ ಒಟ್ಟು ಮೌಲ್ಯ ರೂ/- 2,74,100 ಆಗಿರುತ್ತದೆ  ಈ ಕೃತ್ಯದಲ್ಲಿ ಒಳಗೊಂಡ ಅಪರಿಚಿತ ನಾಲ್ಕು ಜನರನ್ನು ಮುಂದೆ ನೋಡಿದರೂ ಗುರುತಿಸಬಹುದಾಗಿದ್ದು, ಇವರುಗಳೊಂದಿಗೆ  ಸ್ಕಾರ್ಪಿಯೊ ಚಾಲಕ ಭವರ್‌ ಮಹರಾಜ್‌ ಎಂಬವನು ಸೇರಿಕೊಂಡಿರಬಹುದು ಎಂದು ಸಂಶಯವಿರುತ್ತದೆ ಎಂದು ಭುರರಾಮ್ ಪೋಲಿಸರಿಗೆ ದೂರು ನೀಡಿದ್ದಾರೆ

Leave a Reply

Please enter your comment!
Please enter your name here