ಮಂಗಳೂರು : ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಲೋಬೊ

ಮಂಗಳೂರು: ನಗರದ ಇತಿಹಾಸ ಪ್ರಸಿದ್ಧವಾದ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಮಂಗಳೂರು ಮಹಾನಗರ ಪಾಲಿಕೆ ಅನುದಾನದಿಂದ ಸುಮಾರು 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ನೆರವೇರಿಸಿದರು.

09-03-2016-temple-stone-lobo 09-03-2016-temple-stone-lobo-001 09-03-2016-temple-stone-lobo-002

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಮುಂದಿನ ತಿಂಗಳಿನಲ್ಲಿ ಜೀರ್ಣೋದ್ಧಾರವಾಗಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನ ರಸ್ತೆಯು ಕಿರಿದಾಗಿದ್ದು, ಇದನ್ನು ರಾಜ ಮಾರ್ಗವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆ ಅಭಿವೃದ್ಧಿಗೆ ದೇವಸ್ಥಾನದವರು ಮತ್ತು ಸ್ಥಳೀಯರು ಹಾಗೂ ಪಾಲಿಕೆಯ ಅಧಿಕಾರಿಗಳು ಬಹಳಷ್ಟು ಶ್ರಮಿಸಿರುತ್ತಾರೆ. ಎಲ್ಲರೂ ಕೈ ಜೋಡಿಸಿದರೆ ಎಂತಹ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಈ ರಸ್ತೆಯು ಅಭಿವೃದ್ಧಿ ಹೊಂದಿದರೆ ಸೂರ್ಯನಾರಾಯಣ ದೇವಸ್ಥಾನಕ್ಕೆ ಮಹಾನಗರ ಪಾಲಿಕೆಯಿಂದ ಒಂದು ದೊಡ್ಡ ಕೊಡುಗೆಯಾಗಲಿದೆ. ಆದುದರಿಮದ ಅತೀ ಶೀಘ್ರದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸರ್ವರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಪೇಡ್, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಕೇಶವ ಮರೋಳಿ, ದೀಪಕ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಹರಿನಾಥ್, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ವಿಪಕ್ಷ ನಾಯಕ ಸುಧೀರ್ ಶೆಟ್ಟಿ, ಪಾಲಿಕೆ ಆಯುಕ್ತ ಗೋಪಾಲಕೃಷ್ಣ, ಮನಪಾ ಸದಸ್ಯರುಗಳಾದ ಕೆ. ಭಾಸ್ಕರ್, ಪ್ರಕಾಶ್ ಅಳಪೆ, ಪ್ರವೀಣ್ ಆಳ್ವ, ಆಶಾ ಡಿ.ಸಿಲ್ವ, ಅಖಿಲಾ ಆಳ್ವ, ಸಬಿತಾ ಮಿಸ್ಕಿತ್, ದೇವಸ್ಥಾನದ ಆಡಳಿತ ಮಂಡಳಿಯ ಗಿರಿಧರ್, ಬಾಲಕೃಷ್ಣ ಕೊಟ್ಟಾರಿ, ಗುತ್ತಿಗೆದಾರ ಎಂ.ಜಿ. ಹುಸೈನ್, ಪಾಲಿಕೆಯ ಇಂಜಿನಿಯರುಗಳಾದ ಲಿಂಗೇಗೌಡ, ಯಶವಂತ್, ಗಣಪತಿ, ಕಾಂಗ್ರೆಸ್ ಮುಖಂಡರುಗಳಾದ ಶಶಿರಾಜ್ ಅಂಬಟ್, ಟಿ.ಕೆ. ಸುಧೀರ್, ಬಾಲಕೃಷ್ಣ ಶೆಟ್ಟಿ, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply