ಮಂಗಳೂರು: ಅರಳುತ್ತಿರುವ ವ್ಯಕ್ತಿತ್ವದಲ್ಲಿ ಸಾಹಿತ್ಯದ ಕಂಪು ತುಂಬಲಿ-ಎನ್ ಸುಬ್ರಾಯ ಭಟ್

 

ಮಂಗಳೂರು: ಅರಳುವ ಸುಮಗಳಂತಿರುವ ಮಕ್ಕಳ ವ್ಯಕ್ತಿತ್ವದಲ್ಲಿ ಸಾಹಿತ್ಯದ ಕಂಪು ತುಂಬಿದಾಗ, ಅವರು ಸಮಾಜದ ಉಜ್ವಲ ಭವಿಷ್ಯವಾಗುತ್ತಾರೆ ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್ ಸುಬ್ರಾಯ ಭಟ್ ಹೇಳಿದರು.

ಅಲ್ಪ ಸಂಖ್ಯಾತ ಬಾಲಕಿಯರ ಮೊರಾರ್ಜಿದೇಸಾಯಿ ವಸತಿ ಶಾಲೆ, ದೇರಳಕಟ್ಟೆ, ಇಲ್ಲಿ  ಮಕ್ಕಳಿಗಾಗಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಚುಟುಕು ಕವಿಗೋಷ್ಠಿಯಲ್ಲಿ ಅಧ್ಯಕ್ಷರಾಗಿ ಭಾಗವಹಿಸಿ   ಮಾತಾಡಿದ ಅವರು, ಬೆಳೆಯುವ ಮಕ್ಕಳಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಇಂತಹ ಸಂಘಟನೆಗಳು ಜೊತೆಯಾಗಿ ಆಸಕ್ತಿ ವಹಿಸುವ ಅಗತ್ಯ  ಇದೆ ಎಂದು ಹೇಳಿದರು.

1

ಶಿಕ್ಷಕಿ ರಾಧಾ ಹಾಗೂ ಕವಿ ಗುಣಾಜೆ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಚೈತನ್ಯ, ಕಾರುಣ್ಯ, ಶಿಲ್ಪಾ, ಯೋಗಿತಾ, ಪ್ರೆಸಿಲ್ಲಾ, ಪೂಜಾಶ್ರೀ, ಸೌಜನ್ಯ, ತೀಕ್ಷಣಿ, ಕೀರ್ತಿ, ಸಂಜನಾ, ಶರಣ್ಯ, ಭವೀನಾ ಸ್ವರಚಿತ ಚುಟುಕುಗಳನ್ನು ವಾಚಿಸಿದರು.

ಪರಿಷತ್‍ನ ಧರ್ಮಪಾಲ ರಾವ್ ಜಾಧವ್, ವೆಂಕಟೇಶ ಗಟ್ಟಿ, ಸುರೇಖಾ ಎಳವಾರ, ಚಂದನ ಜಿ ಪಂಡಿತ್, ಕಾಸರಗೋಡು ಅಶೋಕ ಕುಮಾರ್ ಕವಿಗಳಾಗಿ ಭಾಗವಹಿಸಿದರು. ಪ್ರೆಸಿಲ್ಲಾ ಸ್ವಾಗತಿಸಿದರು, ಶಿಲ್ಪಾ ವಂದಿಸಿ, ಶಿಕ್ಷಕಿ ಲತಾ ನಿರೂಪಿಸಿದರು.

Leave a Reply