ಮಂಗಳೂರು: ಇನ್ಸ್ ಪೆಕ್ಟರ್ ಅವರ ವರ್ಗಾವಣೆ; ಪೋಲಿಸರ ಪ್ರತಿಭಟನೆ

ಮಂಗಳೂರು:ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಅವರನ್ನು ಒತ್ತಾಯಪೂರ್ವಕ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಪೊಲೀಸರು ಪ್ರತಿಭಟನೆ ನಡೆಸಿದರು.
ಉಳಾಯಿಬೆಟ್ಟುವಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ ಪೆಕ್ಟರ್ ಪ್ರಮೋದ್ ಅವರು ವ್ಯಕ್ತಿಯೊಬ್ಬರುನ್ನು ಬಂಧಿಸಿದ್ದು, ಈ ಸಂಭಂದ ಕಮೀಷನರ್ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್‍ರನ್ನ ರಜೆ ಮೇಲೆ ಕಳುಹಿಸಲಾಗಿದ್ದು, ಪೋಲಿಸ್ ಠಾಣೆಯ 50ಕ್ಕೂ ಹೆಚ್ಚು ಸಿಬ್ಬಂದಿ, ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ಕಾರ್ಯ ಸ್ಥಗಿತಗೊಳಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ಇದಕ್ಕೆ ಸ್ಥಳೀಯರು ಕೂಡ ಬೆಂಬಲ ನೀಡಿದರು.
ಬಳಿಕ ಪೋಲಿಸ್ ಕಮೀಷನರ್ ಮುರುಗನ್ ಸ್ಥಳಕ್ಕೆ ಆಗಮಿಸಿ ಇನ್ಸ್ ಪೆಕ್ಟರ್ ಪ್ರಮೋದ್ ಅವರು ರಜೆ ಮೇಲೆ ತೆರಳಿದ್ದು ಸದ್ಯವೇ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಆಶ್ವಾಸನೆ ನೀಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಎಸ್ ಐ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪ್ರಮೋದ್ ತಾನು ರಜೆಯ ಮೇಲೆ ತೆರಳಿದ್ದು, ಬುಧವಾರ ಕರ್ತವ್ಯಕ್ಕೆ ಹಾಜರಾಗುವುದಾಗಿ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆ ವಾಪಾಸ್ ಪಡೆಯಲಾಯಿತು.

Leave a Reply

Please enter your comment!
Please enter your name here