ಮಂಗಳೂರು: ಉದ್ಯಮಿಯ ಕೊಲೆಗೆ ಯತ್ನಿಸಿದ 3 ಆರೋಪಿಗಳ ಸೆರೆ

ಮಂಗಳೂರು: ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಮೂರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬುಧವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಿದ್ದಿಕ್ @ ಅಬೂಬಕ್ಕರ್ ಸಿದ್ದಿಕ್, ಪ್ರಾಯ(28), ಫೈಜಲ್ ನಗರ, ಮಂಗಳೂರು, ಉಮ್ಮರ್ ಫಾರೂಕ್ @ ಎವರೆಸ್ಟ್ ಫಾರೂಕ್, ಪ್ರಾಯ(30), ಉಳ್ಳಾಲ ಗ್ರಾಮ, ಮಂಗಳೂರು, ಅಲ್ತಾಫ್, @ ಬೊಟ್ಟು ಅಲ್ತಾಫ್, ಪ್ರಾಯ(28), ಉಳ್ಳಾಲ ಅಂಚೆ, ಮಂಗಳೂರು ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ದಿನಾಂಕ: 21-09-2015 4-5 ಮಂದಿ ಯುವಕರು ತಲವಾರಿನೊಂದಿಗೆ ಉದ್ಯಮಿಯೊಬ್ಬರನ್ನು ಹಿಂಬಾಲಿಸಿ ಕೊಲೆಗೆ ಯತ್ನಿಸಿದ್ದು, ಈ ಸಮಯ ಸ್ಥಳದಲ್ಲಿ ಜನರು ಸೇರಿರುವುದನ್ನು ಕಂಡು ವಾಪಾಸು ಅವರು ಬಂದ ಚೆರ್ವಲೆಟ್ ಬೀಟ್ ಕಾರಿನಲ್ಲಿ ಓಡಿ ಹೋಗಿ ಕುಳಿತು ಪರಾರಿಯಾಗಿದ್ದರು. ಈ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಉಪಯೋಗಿಸಿದ ಚೆವರ್ಲೆಟ್ ಕಾರಿನ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಅದೇ ದಿನ ಮಂಗಳೂರು ಚಿಲಿಂಬಿ ಬಳಿಯಿಂದ ಕಾರನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದವರ ಪೈಕಿ ಆರೋಪಿ ರಾಜು @ ಜಪಾನ್ ಮಂಗ ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು ಮತ್ತು 2 ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುತ್ತಾರೆ.

ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಶ್ರೀ.-ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸಪೆಕ್ಟರ್ ವೆಲೆಂಟೈನ್ ಡಿಸೋಜ, ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here