ಮಂಗಳೂರು: ಯುವಕನನ್ನು ಚೂರಿಯಿಂದ ಇರಿದು ಕೊಲೆ

ಮಂಗಳೂರು: 22 ವರುಷ ಪ್ರಾಯದ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರು ತಾಲೂಕು ಕಛೇರಿಯ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ranjith

2

ಮೃತ ಯುವಕನನ್ನು ಉಳ್ಳಾಲ ಮೊಗವೀರಪಟ್ನದ ರಂಜಿತ್ ಎಂದು ಗುರುತಿಸಲಾಗಿದ್ದು, ವೃತ್ತಿಪರ ಕಿಸೆಗಳ್ಳ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ರಂಜಿತ್ ಅವರನ್ನು ಧನು ಎನ್ನುವವರು ನೆಹರು ಮೈದಾನದ ಬಳಿ ಚೂರಿಯಿಂದ ಇರಿದಿದ್ದು, ಗಂಭೀರ ಗಾಯಗೊಂಡ ರಂಜಿತ್ ಪ್ರಾಣ ಉಳಿಸಿಕೊಳ್ಳಲು ತಾಲೂಕು ಆಫಿಸ್ ತನಕ ಒಡಿಬಂದಿದ್ದು, ವೆನ್ಲಾಕ್ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಗಿತ್ತು ಆದರೆ ದಾರಿಮಧ್ಯೆ ಆತ ಸಾವನಪ್ಪಿದ್ದಾರೆ.

ಆರೋಪಿ ಧನು ಸ್ಥಳದಿಂದ ನಾಪತ್ತೆಯಾಗಿದ್ದು, ಸ್ಥಳಕ್ಕೆ ಪೋಲಿಸ್ ಕಮೀಶನರ್, ಬೆರಳಚ್ಚು ತಜ್ಞರು ಆಗಮಿಸಿದ್ದು ತನಿಖೆ ನಡೆಯುತ್ತಿದೆ.

ಪಾಂಡೇಶ್ವರ ಪೋಲಿಸರು ದೂರು ದಾಖಲಿಸಿದ್ದಾರೆ.

Leave a Reply