ಮಂಗಳೂರು: ಎರಡು ವರ್ಷದೊಳಗೆ ಎಲ್ಲ ರಸ್ತೆ, ಫುಟ್‍ಪಾತ್ ಅಭಿವೃದ್ಧಿ – ಶಾಸಕ ಲೋಬೊ

ಮಂಗಳೂರು: ಕನಿಷ್ಟ ಎರಡು ವರ್ಷದೊಳಗೆ ನಗರದಲ್ಲಿರುವ ಪ್ರಮುಖ ಹಾಗೂ ಒಳ ರಸ್ತೆಗಳ ಮತ್ತು ಫುಟ್‍ಪಾತ್ ಸಮಸ್ಯೆಗಳಿಗೆ ಪರಿಹಾರದೊರಕಲಿದೆ. ವಿಧಾನಸಭಾ ಹಾಗೂ ಮಹಾನಗರ ಪಾಲಿಕೆ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

1-jr-lobo-20150928 2-jr-lobo-20150928-001 3-jr-lobo-20150928-002 4-jr-lobo-20150928-003

ರಾಜ್ಯ ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದ ಸುಮಾರು ರೂಪಾಯಿ 1.65 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಿಜೈ-ಅನೆಗುಂಡಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜೆ.ಆರ್.ಲೋಬೊರವರು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು. ಬಳಿಕ, ಸುಮಾರು 30 ಲಕ್ಷ ರೂಪಾಯಿ ಎಸ್.ಎಫ್.ಸಿ ಅನುದಾನದಲ್ಲಿ ಅನೆಗುಂಡಿ ಆಶ್ರಯ ರಸ್ತೆಯ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೊಜ, ಸ್ಥಳಿಯ ಕಾರ್ಪೋರೇಟರ್ ಲ್ಯಾನ್ಸ್‍ಲಾಟ್ ಪಿಂಟೊ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ದೀಪಕ್ ಪೂಜಾರಿ, ಹರಿನಾಥ್, ಕೇಶವ್ ಮಾರೋಳಿ, ಮನಪಾ ಸದಸ್ಯರಾದ ರಜನೀಶ್, ಶೈಲಾಜ, ಅಖೀಲಾ ಆಳ್ವ, ರಾಧಾಕೃಷ್ಣ, ನವೀನ್ ಡಿ’ಸೂಜ, ಶಶಿಧರ್ ಹೆಗ್ಡೆ, ನಾಗವೇಣಿ, ರೂಪಾ ಡಿ’ ಬಂಗೆರಾ, ಪ್ರೆಮಾನಂದ್ ಶೆಟ್ಟಿ ಮತ್ತಿತ್ತರು ಉಪಸ್ಥಿತರಿರುವರು.

Leave a Reply