ಮಂಗಳೂರು: ಐದು ವರ್ಷಗಳಲ್ಲಿ ವೆನ್‍ಲಾಕ್ ಆಸ್ಪತ್ರೆ ಸುಸಜ್ಜಿತಗೊಳಿಸಲು ಕೆ.ಎಂ.ಸಿ.ಗೆ ಕರೆ     

ಮಂಗಳೂರು: ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಕ್ಕಪಕ್ಕದ  5-6 ಜಿಲ್ಲೆಗಳ ಜನರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದು, ಈ ಆಸ್ಪತ್ರೆಯು ಸುಮಾರು ಒಂದೂವರೆ ಶತಮಾನದಷ್ಟು ಹಳೆಯದಾಗಿದ್ದು, ಈ ಕಟ್ಟಡವನ್ನು ಇನ್ನು 5 ವರ್ಷಗಳಲ್ಲಿ  ಹಂತ ಹಂತವಾಗಿ ಮಾರ್ಪಡಿಸಿ ಮಣಿಪಾಲ ಆಸ್ಪತ್ರೆಯಂತೆ ಸುಸಜ್ಜಿತಗೊಳಿಸಲು ಜಿಲ್ಲಾಧಿಕಾಅರಿ ಹಾಗೂ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಇಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಹಾಜರಿದ್ದ ಕೆ.ಎಂ.ಸಿ. ಯ ಡೀನ್ ರವರಾದ ಡಾ||ವೆಂಕಟರಾಯ ಪ್ರಭು ಅವರಿಗೆ ತಿಳಿಸಿದರು.

ಕಾಯಕಲ್ಪ ಯೋಜನೆಯಡಿಯಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್‍ನಲ್ಲಿ ರಾಜ್ಯದಲ್ಲಿ 2ನೇ ಬಹುಮಾನವನ್ನು ಪಡೆದಿದ್ದು ಬಹುಮಾನದ ಮೊತ್ತವಾಗಿ ಆಸ್ಪತ್ರೆಗೆ

ರೂ.20-00ಲಕ್ಷ ದೊರಕಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ||ರಾಜೇಶ್ವರಿ ದೇವಿ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ: ರಾಮಕೃಷ್ಣ ರಾವ್ ಮುಂತಾದವರು ಉಪಸ್ಥಿತರಿದ್ದರು.

Leave a Reply