ಮಂಗಳೂರು: ಕದ್ರಿ ಠಾಣಾಧಿಕಾರಿಯಿಂದ ವಕೀಲರ ಮೇಲೆ ಹಲ್ಲೆ, ವಕೀಲರಿಂದ ಪ್ರತಿಭಟನೆ; ಠಾಣಾಧಿಕಾರಿ ಅಮಾನತು

ಮಂಗಳೂರು: ವಕೀಲರೋರ್ವರಿಗೆ ಕದ್ರಿ ಠಾಣಾಧಿಕಾರಿ ನಾಗರಾಜ್ ಹಲ್ಲೆ ನಡೆಸಿದ ಪರಿಣಾಮ ಅಮಾನತುಗೊಂಡ ಪ್ರಕರಣ ಶುಕ್ರವಾರ ನಗರದಲ್ಲಿ ನಡೆದಿದೆ.

5-bar-association-protest-004 3-bar-association-protest-002

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಉತ್ತಮ್ ಎನ್ನುವವರು ತನ್ನ ಕಕ್ಷಿದಾರರೊಂದಿಗೆ ಕದ್ರಿ ಠಾಣೆಗೆ ಬಂದಿದ್ದು ಈ ವೇಳೆ ಕದ್ರಿ ಠಾಣೆಯ ಠಾಣಾಧಿಕಾರಿ ನಾಗರಾಜ್ ಅವರು ವಕೀಲರ ಕಕ್ಷೀದಾರರಾದ ರತ್ನಾಕರ್ ಎಂಬವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದ ವೇಳೆ ಪದೇ ಪದೇ ವಕೀಲರೇ ಉತ್ತರ ನೀಡುತ್ತಿದ್ದರು ಆ ವೇಳೆಯಲ್ಲಿ ವಕೀಲರಿಗೆ ತಾನು ರತ್ನಾಕರ್ ಅವರೇ ಮಾತನಾಡಲಿ ಎಂದು ಹೇಳಿದ್ದು ನನ್ನ ಕಕ್ಷಿದಾರರ ಪರವಾಗಿ ಬಂದಿರುವ ವಕೀಲರಿಗೆ ಮಾತನಾಡಲು ಹಕ್ಕಿದೆ ಎಂದು ಉಡಾಫೆಯಾಗಿ ಮಾತನಾಡಿದರು ಎನ್ನುವುದು ಠಾಣಾಧಿಕಾರಿಗಳು ಹೇಳೀದ್ದಾರೆ.

ಮಧ್ಯಾಹ್ನ ಊಟದ ವೇಳೆ ಮೀರಿದ ಪರಿಣಾಮ ರತ್ನಾಕರ್ ಅವರಿಗೆ ಸಂಜೆ ಬರಲು ತಿಳಿಸಿದ್ದು ಇದಕ್ಕೆ ವಕೀಲರು ನಿರಾಕರಿಸಿದರು. ಮತ್ತೋಮ್ಮೆ ಅವರಲ್ಲಿ ವಿನಂತಿಸಿದ ವೇಳೆ ವಕೀಲರು ನನ್ನ ಮೇಜಿನ ಬಳಿ ಬಂದು ಬಾಗಿಲಿಗೆ ಅಡ್ಡವಾಗಿ ನಿಂತರು  ಆವೇಳೆ ನಾನು ಹೊರಗೆ ಹೋಗಲು ಹೇಳಿದ್ದು, ವಕೀಲರು ಬಾಗಿಲು ಹಾಕಿ ಹೊರಹೋಗಲು ನಿರಾಕರಿಸಿದರು ಈ ವೇಳೆ ಸ್ವಲ್ಪ ತಳ್ಳಾಟವಾಗಿದ್ದು ವಕೀಲು ನನ್ನ ಮೇಲೆ ಹಲ್ಲೆ ನಡೆಸಿದರು. ಕರ್ತ್ಯವ್ಯ ನಿರತ ಪೋಲಿಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರ ಪರಿಣಾಮ ವಕೀಲರನ್ನು ವಶಕ್ಕೆ ಪಡೆಯಲಾಗಿದೆ ಎನ್ನುವುದು ಠಾಣಾಧಿಕಾರಿಗಳ ವಾದ.

ಸುದ್ದಿ ತಿಳಿದ ಸ್ಥಳಕ್ಕೆ ಬಂದ ಹಲವಾರು ವಕೀಲರು ಹಾಗೂ ಬಾರ್ ಕೌನ್ಸಿಲ್ ಅಧ್ಯಕ್ಷ ಚೆಂಗಪ್ಪರೊಡಗೂಡಿ ಠಾಣೆಯ ಹೊರಗಡೆ ಪ್ರತಿಭಟನೆ ನಡೆಸಿ ಠಾಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಪ್ರತಿಭಟಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಚೆಂಗಪ್ಪ ಠಾಣಾಧಿಕಾರಿ ನಾಗಪ್ಪ ಅವರು ಯುವ ವಕೀಲ ಉತ್ತಮ್ ಅವರಿಗೆ ಹಲ್ಲೆ ನಡೆಸಿದ್ದು, ಇದರಿಂದ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಲಿಸ್ ಕಮೀಷನರ್ ಕೂಡಲೇ ನಾಗರಾಜ್ ಅವರನ್ನು ಅಮಾನತುಗೊಳಿಸಬೇಕು ಅಲ್ಲದೆ ಕೇಸು ದಾಖಲಾಗುವ ವರೆಗೂ ನಾವು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಸ್ಥಳಕ್ಕೆ ಕಾನೂನು ಪಾಲನೆ ಡಿಸಿಪಿ ಶಾಂತರಾಜ್ ಅವರು ಆಗಮಸಿ ಪ್ರತಿಭಟನೆ ವಾಪಾಸ್ ಪಡೆಯುವಂತೆ ಮನವಿ ಮಾಡಿದರು ಅಲ್ಲದೆ ಘಟನೆಗೆ ಕಾರಣರಾದ ಪೋಲಿಸ್ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಸಂಜೆಯ ವೇಳೆಗೆ ಬಂದ ಮಾಹಿತಿಗಳ ಪ್ರಕಾರ ವಕೀಲರ ಮೇಲಿನ ಹಲ್ಲೆಗೆ ಸಂಬಂಧಿಸಿ ಠಾಣಾಧಿಕಾರಿ ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply