ಮಂಗಳೂರು: ಕಲ್ಬುರ್ಗಿ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ;ಹಿಂದೂ ನಾಯಕ ಪ್ರಸಾದ್ ಅತ್ತಾವರ ಬಂಧನ

ಮಂಗಳೂರು: ಡಾ ಎಮ್ ಎಮ್ ಕಲ್ಬುರ್ಗಿ ಸಾವಿನ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮಾತುಗಳನ್ನು ಹೇಳಲಾಗಿದೆ ಎಂಬ ಆರೋಪದಲ್ಲಿ ಹಿಂದೂ ಸಂಘಟನೆಗೆ ಸೇರಿದ ನಾಯಕ ಪ್ರಸಾದ್ ಅತ್ತಾವರ ಅವರನ್ನು ಬಂದರು ಠಾಣೆಯ ಪೋಲಿಸರು ಗುರುವಾರ ಹಳೆ ಬಸ್ ಸ್ಟ್ಯಾಂಡ್ ಬಳಿಯಿಂದ ಬಂಧಿಸಿದ್ದಾರೆ

ಡಾ ಎಮ್ ಎಮ್ ಕಲ್ಬುರ್ಗಿ ಸಾವಿನ ಕುರಿತಂತೆ ಯಾರು ಹಿಂದೂ ದೇವತೆಗಳನ್ನು ಅವಮಾನಿಸುತ್ತಾರೋ ಅವರಿಗೆ ಅದೇ ಗತಿ ಆಗಲಿದೆ ಎಂದು ಪ್ರಸಾದ್ ಅತ್ತಾವರ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ಮಾಡಿದ್ದರು ಎಂದು ಆರೋಪಿಸಿದ್ದು, ಈ ಬಗ್ಗೆ ಪೋಲಿಸರು ಸ್ವಯಂ ಪ್ರೇರಿತ ಕೇಸನ್ನು ದಾಖಲಿಸಿ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಅಗಸ್ಟ್ 31 ರಂದು ಬಂಟ್ವಾಳ ಪೋಲಿಸರು ಬಜರಂಗದಳ ಸಹಸಂಚಾಲಕ ಭುವಿತ್ ಶೆಟ್ಟಿ ಎನ್ನುವವರನ್ನು ಕೂಡ ಇಂತಹುದೆ ಆರೋಪದಡಿಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದರು.

Leave a Reply