ಮಂಗಳೂರು : ಕಾನೂನು ರಕ್ಷಕರಿಂದ ಉಲ್ಲಂಘನೆ;ಹೆಲ್ಮೆಟ್‌ ಇಲ್ಲದೆ ಪ್ರಯಾಣ: ಎಎಸೈಗೆ ದಂಡ!

ಮಂಗಳೂರು : ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಆದೇಶ ಜಾರಿಗೊಂಡಿದ್ದರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದವರಿಂದಲೇ ಉಲ್ಲಂಘನೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಎಎಸೈಯೊಬ್ಬರು ಹೆಲ್ಮೆಟ್‌ ಧರಿಸದ ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ದೃಶ್ಯವು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಸಂಬಂಧಿಸಿದ

ಅಧಿಕಾರಿ ಮೇಲೆ ದಂಡ ವಿಧಿಸಿದ್ದಾರೆ. ಬುಧವಾರ ನಗರದ ಕಂಕನಾಡಿ ಬಳಿ ಎಎಸೈ ಶ್ರೀಧರ್‌ ಎಂಬವರೊಂದಿಗೆ ಮಹಿಳಾ ಸಿಬ್ಬಂದಿಯೊಬ್ಬರು ಹೆಲ್ಮೆಟ್‌ ಧರಿಸದೆ ಪ್ರಯಾಣಿಸುತ್ತಿದ್ದ ಚಿತ್ರವನ್ನು ಯಾರೋ ಸೆರೆ ಹಿಡಿದು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ತಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಬೈಕ್‌ ಚಲಾಯಿಸುತ್ತಿದ್ದ ಎಎಸೈ ಶ್ರೀಧರ್‌ ರನ್ನು ಗುರುತಿಸಿ ಅವರ ಮೇಲೆ ಸ್ವಯಂ ಪ್ರೇರಿತವಾಗಿ 100 ರೂ. ದಂಡ ವಿಧಿಸಿದ್ದಾರೆ.

1 Comment

Leave a Reply

Please enter your comment!
Please enter your name here