ಮಂಗಳೂರು: ಕಾರವಾರದಲ್ಲಿ ರಾಜ್ಯ ಮಟ್ಟದ ರಾಜೀವ್‍ಗಾಂಧಿ ಖೇಲ್ ಅಭಿಯಾನ್  ಗ್ರಾಮೀಣ ಕ್ರೀಡಾಕೂಟ

ಮ0ಗಳೂರು : 2015-16ನೇ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ  ಖೇಲ್ ಅಭಿಯಾನ್ ಗ್ರಾಮೀಣ ಕ್ರೀಡಾಕೂಟವು  ನ.13 ರಿಂದ  ನ.15 ರ ವರೆಗೆ ಗುಂಪು-02  (ಕಬಡ್ಡಿ, ಖೋ ಖೋ ಜಡೊ ಮತ್ತು ಟೇಬಲ್ ಟೆನ್ನಿಸ್) ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಕ್ರೀಡಾಪಟುಗಳು ನ.13 ರಂದು ಪೂರ್ವಹ್ನ 10 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ  ತಾಲೂಕು ಕ್ರೀಡಾಂಗಣದಲ್ಲಿ ತಮ್ಮ ಜಾತಿ, ಬ್ಯಾಂಕ್ ಖಾತೆ ನಂಬರ್, ಐ ಎಫ್ ಎಸ್ ಸಿ ಕೋಡ್ ಹಾಗೂ ವಿಳಾಸದ ಪೂರ್ಣ ಮಾಹಿತಿಯೊಂದಿಗೆ ವರದಿ ಮಾಡಿಕೊಳ್ಳಲು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಜಿಲ್ಲೆ ಮಂಗಳೂರು ಸೂಚಿಸಿದ್ದಾರೆ.

   2015-16ನೇ ಸಾಲಿನ ರಾಜ್ಯ ಮಟ್ಟದ ರಾಜೀವ್‍ಗಾಂಧಿ  ಖೇಲ್ ಅಭಿಯಾನ್ ಮಹಿಳಾ ಕ್ರೀಡಾಕೂಟವು ನ. 17 ರಿಂದ  ನ. 19 ರ ವರೆಗೆ ಗುಂಪು-3 (ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್) ಬೆಳಗಾವಿ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.

 ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಕ್ರೀಡಾಪಟುಗಳು ನ.17 ರಂದು ಮದ್ಯಾಹ್ನ 2 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ  ತಾಲೂಕು ಕ್ರೀಡಾಂಗಣದಲ್ಲಿ ತಮ್ಮ ಜಾತಿ, ಬ್ಯಾಂಕ್ ಖಾತೆ ನಂಬರ್, ಐ ಎಫ್ ಎಸ್ ಸಿ ಕೋಡ್ ಹಾಗೂ ವಿಳಾಸದ ಪೂರ್ಣ ಮಾಹಿತಿಯೊಂದಿಗೆ ವರದಿ ಮಾಡಿಕೊಳ್ಳಲು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ ಜಿಲ್ಲೆ ಮಂಗಳೂರು ಸೂಚಿಸಿದ್ದಾರೆ.

Leave a Reply

Please enter your comment!
Please enter your name here