ಮಂಗಳೂರು: ಕಾವೂರಿನಲ್ಲಿ ಗುಜರಿ ವ್ಯಾಪಾರಿಯನ್ನು ಇರಿದು ಕೊಲೆ

ಮಂಗಳೂರು: 55 ವರ್ಷ ವಯಸ್ಸಿನ ವ್ಯಕ್ತಿಯೋರ್ವರನ್ನು ಇರಿದು ಕೊಲೆ ಮಾಡಿದ ಘಟನೆ ಕಾವೂರು ಮುರದಲ್ಲಿ ಬುಧವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಕಾವೂರು ಅಂಬಿಕಾ ನಗರ ನಿವಾಸಿ ಹಸನಬ್ಬ ಅವರ ಪುತ್ರ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಮೃತ ಹಸನಬ್ಬ ವೃತ್ತಿಯಲ್ಲಿ ಗುಜರಿ ವ್ಯಾಪಾರಿಯಾಗಿದ್ದರು.

ಮಾಹಿತಿಗಳ ಪ್ರಕಾರ ತನ್ನ ದ್ವಿಚಕ್ರವಾಹನದಲ್ಲಿ ಸಂಜೆ 8 ಗಂಟೆಗೆ ತನ್ನ ಗೆಳೆಯನ್ನು ಬಿಡಲು ತೆರಳಿದ್ದು, ಅಪರಿಚಿತ ವ್ಯಕ್ತಿಯೋರ್ವರು ಮೊಹಮ್ಮದ್ ಅವರನ್ನು ಇರಿದಿದ್ದು, ಕೂಡಲೇ ಮೊಹಮ್ಮದ್ ಅವರ ಇಬ್ಬರು ಗೆಳೆಯರು ಆಸ್ಪತ್ರೆಗೆ ಸಾಗಿಸಿದ್ದು, ಎಜೆ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಸಾವನಪ್ಪಿದ್ದರು. ಮಾಹಿತಿಗಳ ಪ್ರಕಾರ ಆಸ್ತಿ ವಿಚಾರದಲ್ಲಿ ಈ ಇರಿತ ನಡೆದಿದೆ ಎನ್ನಲಾಗಿದೆ.

ಘಟನೆಯ ಸಂಬಂಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯಲಾಗುತ್ತಿದೆ,

.

Leave a Reply