ಮಂಗಳೂರು: ಕುಂಜತ್ತಬೈಲ್ : ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಇಲ್ಲಿನ ಕುಂಜತ್ತಬೈಲ್ ಮರಕಡ ಎಂಬಲ್ಲಿ “ಮಹ್ ಶರ”, ಮರಕಡ ಕುಂಜತ್ತಬೈಲ್ ಜಮಾಅತ್, ಗಲ್ಫ್ ನೌಕರರ ಸಂಘ ಕುಂಜತ್ತಬೈಲ್ ಇವರ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುಂಟಿಕಾನ, ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.

feb-21-blood-donation feb-21-blood-donation-001 feb-21-blood-donation-002 feb-21-blood-donation-003 feb-21-blood-donation-004

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಜತ್ತಬೈಲ್ ಕಾರ್ಪೋರೇಟರ್ ಕೆ.ಮೊಹಮ್ಮದ್ ವಹಿಸಿದರು. ಸಿದ್ದೀಕ್ ಜುಮಾ ಮಸೀದಿ ಖತೀಬ್ ಎನ್.ವಿ. ಇಸ್ಹಾಖ್ ಸಖಾಫಿ ದುವಾಶಿರ್ವಚನ ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷ ನೂರ್ ಮೊಹಮ್ಮದ್, ಮಂಗಳೂರು ಮ.ನ.ಪಾ. ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್, ಎ.ಜೆ.ಆಸ್ಪತ್ರೆಯ ವೈದ್ಯರಾದ ಡಾ. ಅರವಿಂದ್, ಸಿದ್ದೀಕ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ಭಾಗವಹಿಸಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ಅಥಿತಿಗಳನ್ನು ಸ್ವಾಗತಿಸಿ ವಂಧಿಸಿದರು. ಶಿಬಿರದಲ್ಲಿ 84 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

Leave a Reply