ಮಂಗಳೂರು: ಕೋಟಿಮುರದಲ್ಲಿ ಸಮುದಾಯ ಭವನ ಉದ್ಫಾಟನೆ

ಮಂಗಳೂರು:  ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರ ವಿಶೇಷ ಶಿಫಾರಸ್ಸಿನ ಮೇರೆಗೆ 2012-13ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಡೀಕೃತ  ಅನುದಾನದಿಂದ ಕುಲಶೇಖರದ ಕೋಟಿಮುರದಲ್ಲಿ ಸುಮಾರು 25.00 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಮುದಾಯ ಭವನನವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಜೆ.ಆರ್. ಲೋಬೊರವರು ಉದ್ಫಾಟಿಸಿದರು.

jr-lobo jr-lobo-1

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜೆಸಿಂತಾ ವಿಜಯಾ ಆಲ್ಪ್ರೆಡ್, ಸ್ಥಳೀಯ ಮನಪಾ ಸದಸ್ಯರಾದ ಶ್ರೀ ಭಾಸ್ಕರ್ ಕೆ, ಗುತ್ತಿಗೆದಾರರಾದ ನೆಲ್ಸನ್ ಮೊಂತೆರೋ, ಯುವಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ರಮಾನಂದ ಪೂಜಾರಿ, ಗುರಿಕಾರರಾದ ಶ್ರೀ ರಾಮ ಹಾಗೂ ಸ್ಥಳೀಯರಾದ ವಿಶ್ವನಾಥ್, ವಾಲ್ಟರ್ ಡಿ.ಕುನ್ಹ, ಆಲ್ವಿನ್ ರೇಗೋ, ಆಲ್ವಿನ್ ಪಾಯಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸತೀಶ್ ನಿರೂಪಿಸಿದರು.

Leave a Reply

Please enter your comment!
Please enter your name here