ಮಂಗಳೂರು: ಕ್ರೈಸ್ತರ ಪವಿತ್ರ ಸ್ಥಳ ದರ್ಶನಕ್ಕೆ ಅನುದಾನ ಒತ್ತಾಯಿಸಿ ಮನವಿ

ಮಂಗಳೂರು: ಕ್ರೈಸ್ತರ ಪವಿತ್ರ ಸ್ಥಳವಾದ ಜೆರೊಸಲೆಂ, ಬೆತ್ಲೆಹೇಮ್ ಹಾಗು ಈಜಿಪ್ಟಿನ ಸಿನಾಯಿ ಪರ್ವತದ ದರ್ಶನಕ್ಕೆ (ಹೋಲಿ ಲ್ಯಾಂಡ್) ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಧರ್ಮಪ್ರಾಂತೀಯರು ಸರಕಾರದ ಅನುದಾನಕ್ಕಾಗಿ ಒತ್ತಾಯಿಸಿ ಒಂದು ಮನವಿಯನ್ನು ಕರ್ನಾಟಕ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀ. ಜೆ.ಆರ್ ಲೋಬೋ ಅವರಿಗೆ ಇಂದು ನೀಡಿದರು.

1-lobo 2-lobo-001

ಮನವಿಯನ್ನು ಸ್ವಿಕರಿಸಿದ ಅಧ್ಯಕ್ಷರು, ಸರಕಾರದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುದಾಗಿ ಭರವಸೆ ಕ್ರಿಶ್ಚಯನ್ ಮುಂಖಡರಿಗೆ ನೀಡಿದರು.

ಈ ಸಂದರ್ಭದಲ್ಲಿ ಸಿ.ಎಸ್.ಐ. ಕರ್ನಾಟಕ ಸಭಾಪ್ರಾಂತದ ಪರವಾಗಿ ಶ್ರೀ.ಜಯಕರ್ ಸಮರ್ಥ, ಡಾ.ಸುರಂಜನ್ ಮಾಬೆನ್,ಶ್ರೀ. ಶಶಿಪಾಲ್ ಶೆಟ್ಟಿಯಾನ್ ಮತ್ತು ಕಥೋಲಿಕ್ ಧರ್ಮಪ್ರಾಂತದ ಪರವಾಗಿ ವಂ.ಜೆ.ಬಿ.ಕ್ರಾಸ್ತ, ಹೋಲಿ ರೋಜರಿ ಕ್ಯಾಥೆಡ್ರಲ್ , ಶ್ರೀ ಎಮ್.ಪಿ. ನರ್ಹೋನಾ, ಕಾರ್ಯದರ್ಶಿ, ಪಾಲನ ಸಮಿತಿ , ಮಂಗಳೂರು ಪ್ರಾಂತ್ಯ. ವಂ.ವಿಲ್ಲಿಯಂ ಮಿನೇಜಸ್, ಸಾರ್ವಜನಿಕ ಸಂಪರ್ಕಾಧಿಕಾರಿ , ಶ್ರೀ ಅನಿಲ್ ಲೋಬೋ, ಅಧ್ಯಕ್ಷರು , ಕಥೋಲಿಕ್ ಸಭಾ, ಮಂಗಳೂರು ವಲಯ , ಶ್ರೀ ಸ್ಟ್ಯಾನಿ ಅಲ್ವಾರಿಸ್ , ಮಾಂಡ್ ಸೋಭಾಣ್ ಮಾಜಿ ಅಧ್ಯಕ್ಷ ಇವರು ಉಪಸ್ಥಿತರಿದ್ದರು.

ಕಥೋಲಿಕ್ ಧರ್ಮ ಪ್ರಾಂತದ ಬಿಷೋಪರಾದ ಡಾ.ಅಲೋಶಿಯಸ್ ಪೌಲ್ ಡಿಸೋಜ ಮತ್ತು ಸಿ.ಎಸ್.ಐ. ಕರ್ನಾಟಕ ಸಭಾಪ್ರಾಂತದ ಬಿಷೋಪರಾದ ಮೋಹನ್ ಮನೋರಾಜ್ ಸರಕಾರಕ್ಕೆ ಪತ್ರ ಬರೆದಿರುತ್ತಾರೆ.

Leave a Reply