ಮಂಗಳೂರು : ಗಾಂಜಾ ಮಾರಾಟ ಮೂವರ ಬಂಧನ

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಫೆಬ್ರವರಿ 14 ರಂದು ಪಣಂಬೂರು ಪೋಲಿಸರು ಅಂಗರಗುಂಡಿ ಬಸ್ಸು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಬೆಂಗ್ರೆ ನಿವಾಸಿ ರಹೀಂ, ತುಂಬೆ ನಿವಾಸಿ ಸೀರಾಜ್ ಮತ್ತು ಬೈಕಂಪಾಡಿ ನಿವಾಸಿ ರಜಾಕ್ ಎಂದು ಗುರುತಿಸಲಾಗಿದೆ.
ಫೆಬ್ರವರಿ 14 ರಂದು ಬೆಳಿಗ್ಗೆ ಪಣಂಬೂರು ಪೋಲಿಸ್ ಠಾಣಾ ನೀರಿಕ್ಷಕ ಲೋಕೆಶ್ ಅವರಿಗೆ ದೊರೆತ ಖಚಿತ ಮಾಹಿತಿ ದೊರೆತ ಮೇರೆಗೆ ಧಾಳಿ ನಡೆಸಿ ಆರೋಪಿಗಳಿಂದ ರೂ 18000 ಮೌಲ್ಯದ 1 ಕೆಜಿ 50ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Leave a Reply