ಮಂಗಳೂರು: ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜನತೆಯ ಸೇವೆ ವೈದ್ಯರ ಗುರಿಯಾಗಬೇಕು – ಶಾಸಕ ಜೆ.ಆರ್. ಲೋಬೋ

ಮಂಗಳೂರು: ವೈದ್ಯಕೀಯ ಸೇವೆಯನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ದೃಷ್ಟಿಯಿಂದ ನೋಡಬಾರದು. ಯಾಕೆಂದರೆ ಜನರು ವೈದ್ಯರನ್ನು ದೇವರಂತೆ ಭಾವಿಸಿದ್ದು ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ದೇಶವ್ಯಾಪಿ ಬಹತೇಕ ವೈದ್ಯರು ನಗರಪ್ರದೇಶದಲ್ಲಿಯೇ ಸೇವೆ ಸಲ್ಲಿಸಲು ಉತ್ಸುಕರಾಗುತ್ತಿರುವುದರಿಂದ ಗ್ರಾಮೀಣ ಭಾಗದ ಜನತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ ಅಭಿಪ್ರಾಯಪಟ್ಟರು.

1

ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳ ಜ್ಞಾನವರ್ಧನೆ ಹಾಗೂ ಇತ್ತೀಚಿನ ವೈದ್ಯಕೀಯ ಬೆಳವಣಿಗೆಯ ಕುರಿತಂತೆ ಮಾಹಿತಿ ನೀಡುವ ಸಲುವಾಗಿ ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಸೇವೆಗಳಿಗಿಂತಲೂ ವೈದ್ಯಕೀಯ ಸೇವೆ ಮಿಗಿಲು. ವೈದ್ಯರುಗಳಿಗೆ ಸಮಾಜದಲ್ಲಿ ಮಹತ್ತರ ಜವಬ್ದಾರಿ ಇದೆ. ವೈದ್ಯರುಗಳ ಸೇವೆ ಗ್ರಾಮೀಣ ಭಾಗಕ್ಕೂ ಲಭ್ಯವಾಗಬೇಕೆಂಬ ನೆಲೆಯಲ್ಲಿ ರಾಜ್ಯ ಸರಕಾರ ಯುವವೈದ್ಯರ ಸೇವೆ ಗ್ರಾಮೀಣ ಭಾಗಕ್ಕೂ ಸಲ್ಲಬೇಕು ಎಂಬ ಆದೇಶ ಹೊರಡಿಸಿದ್ದು ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಜನತೆಯ ಸೇವೆ ವೈದ್ಯರ ಗುರಿಯಾಗಬೇಕು ಎಂದು ನುಡಿದರು.

2

ಕಂಕನಾಡಿಯ್ಲಿರುವ ಫಾ. ಮುಲ್ಲರ್ ಆಸ್ಪತ್ರೆಯಲ್ಲಿ ಲಭ್ಯವಾಗುವ ಸೇವೆ ಶತಮಾನಗಳಿಂದಲೂ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಕಂಕನಾಡಿ ಎಂದ ತಕ್ಷಣ ಜನರು ಫಾ. ಮುಲ್ಲರ್ ಆಸ್ಪತ್ರೆಯನ್ನೇ ನೆನಪಿಸುತ್ತಾರೆ. ಹಾಗಾಗಿ ವೈದ್ಯರು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಂಬಂ„ತ ಸಂಸ್ಥೆಯ ಮೌಲ್ಯವೂ ವೃದ್ಧಿಸುತ್ತದೆ. ಹಾಗಾಗಿ ಮಾನವೀಯ ನೆಲೆಯಲ್ಲಿ ಸಲ್ಲಿಸುವ ಸೇವೆ ಸದಾಕಾಲ ಜನಮಾನಸದಲ್ಲಿ ಉಳಿಯುವುದು ಖಚಿತ ಎಂದರು.

ಆಧುನಿಕ ಶೈಲಿಯ ಆಹಾರ ಪದ್ಧತಿಯಿಂದಾಗಿ ಹೃದಯರೋಗ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ರೋಗಗಳು ಸಾಮಾನ್ಯವಾಗಿಬಿಟ್ಟಿದೆ. ಅದಕ್ಕಾಗಿ ಮಹಾವಿದ್ಯಾಲಯಗಳಲ್ಲಿ ಆಸ್ಪತ್ರೆಗಳಲ್ಲಿ ನಡೆಯುವಂತಹ ಸಮ್ಮೇಳನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಗತ್ಯವಾದ ವಿನೂತನ ಆವಿಷ್ಕಾರಗಳ ಬಗ್ಗೆ ಚಿಂತನೆ ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಫಾ. ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾ. ಪ್ಯಾಟ್ರಿಕ್ ರಾಡ್ರಿಗಸ್ ಮಾತನಾಡಿ ಸಮ್ಮೇಳನದಲ್ಲಿ ಭಾಗವಹಿಸಿದ ತಜ್ಞರಿಂದ ಪಡೆದ ಮಾಹಿತಿಗಳು ವೈದ್ಯಕೀಯ ಕ್ಷೇತ್ರಕ್ಕೆ ಬಹಳಷ್ಟು ಉಪಯುಕ್ತವಾಗಲಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ನುಡಿದರು.

ಸಮ್ಮೇಳನ ನೆನಪಿಗಾಗಿ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು.

ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾ„ಕಾರಿ ವಿನ್ಸೆಂಟ್ ಸಲ್ದಾನ್ಹ ಉಪಸ್ಥಿತರಿದ್ದರು.

ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪ್ರಸಾದ್.ಕೆ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದ ಸಂಯೋಜಕಿ ಡಾ. ವಿಲ್ಮಾ ಡಿಸೋಜ ವಂದಿಸಿದರು.

Leave a Reply

Please enter your comment!
Please enter your name here