ಮಂಗಳೂರು: ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ; ಒರ್ವನಿಗೆ ಗಾಯ – ಪ್ರಯಾಣಿಕರು ಪಾರು

ಮಂಗಳೂರು: ಚಲಿಸುತ್ತಿದ್ದ ಬಸ್ಸು ಬೈಕೊಂದಕ್ಕೆ ಮುಕಾಮುಖಿ ಡಿಕ್ಕಿ ಹೊಡೆದ ಬಳಿಕ ಬೆಂಕಿಗಾಹುತಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾದ ಘಟನೆ ಬಂಟ್ವಾಳ ತಾಲೂಕಿನ ಬೊಲ್ಲುಕಲ್ ಎಂಬಲ್ಲಿ ಗುರುವಾರ ಸಂಭವಿಸಿದೆ.

ಖಾಸಗಿ ಬಸ್ಸು ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದು, ಮಾಣಿ ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಪೆಟ್ರೋಲ್ ಟ್ಯಾಂಕ್ ಒಡೆದು ಬೆಂಕಿ ಹತ್ತಿಕೊಂಡಿದ್ದು ಸಂಪೂರ್ಣ ಬಸ್ಸು ಬೆಂಕಿಗಾಹುತಿಯಾಗಿದೆ.

fire_bus_bollkotu 17-09-2015 18-45-00 fire_bus_bollkotu 17-09-2015 18-45-001

ಬೈಕ್ ಸವಾರನ್ನು ಉಪ್ಪಿನಂಗಡಿ ನಿವಾಸಿ ಚೇತನ್ ಗೌಡ (28) ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿದ್ದು, ಬಸ್ಸಿನಿಂದ ಕೂಡಲೇ ಪ್ರಯಾಣಿಕರನ್ನು ಹೊರಗೆ ಕರೆತರಲಾಯಿತು.

ಅತೀವೇಗ ಮತ್ತು ಅಜಾಗರುಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ಬೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಬಸ್ಸು ಸಂಪೂರ್ಣ ಸುಟ್ಟು ಹೋಗಿದೆ.

ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಬೆಳ್ಳಿಯಪ್ಪ ಮತ್ತು ತಂಡ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

Leave a Reply