ಮಂಗಳೂರು : ಜಯಾನಂದ ಅಮ್ಮಣ್ಣ ಕೊಲೆ ಆರೋಪಿಗಳ ಬಂಧನ

ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟಿನ ಎಎಸ್ ಕೆ ವೆಜ್ ಎಲೈಟ್ ಸೆಂಟರ್ ಬಳಿ ಫೆಬ್ರವರಿ 29 ರಂದು ಜಯಾನಂದ ಅಮ್ಮಣ್ಣ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂದರು ಪೋಲಿಸರು ಮಾರ್ಚ್ 20 ಬಂಧಿಸಿದ್ದಾರೆ.

jayananda-murder-accused-arrest-20160320 (5)

ಬಂಧಿತರನ್ನು ಪಂಪ್ ವೆಲ್ ನಿವಾಸಿ ರವಿ ಯಾನೆ ರವೀಂದ್ರ ಸಾಲಿಯಾನ್ (32), ಹಾಗೂ ದಾವಣಗೆರೆ ಜಿಲ್ಲೆ ಹರಿಹರ ನಿವಾಸಿ ನವೀನ (20) ಎಂದು ಗುರುತಿಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರು ಕೊಲೆಯಾದ ವ್ಯಕ್ತಿ ಹಾಗೂ ಬಂಧಿತ ಆರೋಪಿಗಳು ಕೂಲಿ ಕಾರ್ಮಿಕರಾಗಿದ್ದು, ಕುಡಿದ ಮತ್ತಿನಲ್ಲಿ ಜಗಳ ಪ್ರಾರಂಭಿಸಿ ಜಯಾನಂದ ಅವರನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸಿದ ಬಂದರು ಪೋಲಿಸರು ಮಾರ್ಚ್ 20 ರಂದು ಆರೋಪಿಗಳನ್ನು ಪಂಪ್ ವೆಲ್ ಮತ್ತು ಬಿಜೈ ಕೆ.ಎಸ್.ಆರ್.ಟಿ.ಸಿ. ಬಳಿ ಬಂಧಿಸಿದ್ದಾರೆ.
ಪತ್ತೆ ಕಾರ್ಯವನ್ನು ಉತ್ತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಶಾಂತಾರಾಮ, ಸಿಬ್ಬಂದಿಗಳಾದ ಎ.ಎಸ್‌ಐ. ವಸಂತ್‌, ರಾಜೇಶ್ ಆಳ್ವ, ಸುಜನ್ ಶೆಟ್ಟಿ, ಗೋವರ್ಧನ್ ರವರುಗಳ ತಂಡ ಬಂಧಿಸಿದ್ದು, ಇವರಿಗೆ ಪೊಲೀಸ್ ಆಯುಕ್ತರಾದ ಚಂದ್ರಶೇಖರ್ ಐ.ಪಿ.ಎಸ್. ರವರು ಸೂಕ್ತ ಬಹುಮಾನವನ್ನು ನೀಡಿ ಮುಕ್ತಕಂಠದಿಂದ ಶ್ಲಾಘಿಸಿರುತ್ತಾರೆ.
ಸದರಿ ಪತ್ತೆ ಕಾರ್ಯವನ್ನು ಉತ್ತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಶಾಂತಾರಾಮ, ಸಿಬ್ಬಂದಿಗಳಾದ ಎ.ಎಸ್‌ಐ. ವಸಂತ್‌, ರಾಜೇಶ್ ಆಳ್ವ, ಸುಜನ್ ಶೆಟ್ಟಿ, ಗೋವರ್ಧನ್ ರವರುಗಳ ತಂಡ ಮಾಡಿರುತ್ತದೆ.

Leave a Reply

Please enter your comment!
Please enter your name here