ಮಂಗಳೂರು: ಜೀವ ತೆತ್ತಾದರೂ ಗೋವುಗಳ ರಕ್ಷಣೆಗೆ ಸಿದ್ದ : ವಿಎಚ್‍ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ

ಮಂಗಳೂರು: ಗೋವುಗಳ ರಕ್ಷಣೆಗೆ ವಿಶ್ವ ಹಿಂದೂ ಪರಿಷದ್ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಿಎಚ್‍ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ಹೇಳಿದ್ದಾರೆ.

1-bjp-press-20150909 3-bjp-press-20150909-002

ಅವರು ಬುಧವಾರ ತಮ್ಮ ಕಚೇರಿಯ ಆವರಣದಲ್ಲಿ ಕರೆಯಲಾದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಗೋಕಳ್ಳತನ ಅಕ್ರಮ ಕಸಾಯಿಖಾನೆ ದಂಧೆಗಳು ವಿಪರೀತವಾಗಿ ನಡೆಯುತ್ತಿದ್ದು, ಸತತವಾಗಿ ಸಂಘಟನೆಯ ಕಾರ್ಯಕರ್ತರು ಪೋಲಿಸರಿಗೆ ಮಾಹಿತಿ ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಗೃಹ ಸಚಿವ ಕೆ ಜೆ ಜಾರ್ಜ್ ಮಂಗಳೂರಿಗೆ ಭೇಟಿ ನೀಡಿದ ಬಳಿಕ ಮಂಗಳೂರಿನ ಪೋಲಿಸರು ಹಿಂದೂ ಸಂಘಟನೆಗಳ ದೂರವಾಣಿ ಕರೆಗಳನ್ನು ಸಹ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಪೋಲಿಸರು ರಾಜ್ಯ ಸರಕಾರದ ಹಾಗೂ ಗೃಹಸಚಿವರ ಒತ್ತಡಕ್ಕೆ ಮಣಿದು ಅಕ್ರಮ ಕಸಾಯಿ ಖಾನೆಗಳ ವಿರುದ್ದ ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಪೋಲಿಸರು ಹಾಗೂ ರಾಜ್ಯ ಸರಕಾರ ಪರೋಕ್ಷವಾಗಿ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದ್ದು ವಿಎಚ್‍ಪಿ ಇದನ್ನು ಬಲವಾಗಿ ಖಂಡಿಸುತ್ತದೆ ಎಂದರು.

ಅಕ್ರಮ ಗೊಸಾಗಟವನ್ನು ತಡೆಯಲು ಒಂದು ವೇಳೆ ಆಡಳಿತ ವಿಫಲವಾದಲ್ಲಿ ವಿಎಚ್‍ಪಿ ಸಂಘಟನೆ ಕಾರ್ಯಕರ್ತರು ಯಾವುದೆ ಬೆಲೆ ತೆತ್ತಾದರೂ ಗೋಸಾಗಟಕ್ಕೆ ಕೊನೆ ಹಾಡಲಿದೆ. ನಾವು ಯಾವುದೇ ರೀತಿಯ ತ್ಯಾಗಕ್ಕೂ ಕೂಡ ಸಿದ್ದರಿದ್ದು, ಮುಂದಾಗುವ ಘಟನೆಗಳಿಗೆ ಸರಕಾರ ಮತ್ತು ಆಡಳಿತ ಹೊಣೆಯಾಗಲಿದೆ ಎಂದರು.

ಚರ್ಚ್ ಧಾಳಿಯನ್ನು ಉಲ್ಲೇಖಿಸಿ ಮಾತನಾಡಿದ ದಿನೇಶ್ ಕೇವಲ ಒಂದು ಮೂರ್ತಿಯ ಕೈ ತುಂಡಾಗಿದ್ದಕ್ಕೆ ವಿಎಚ್‍ಪಿ ಕಾರ್ಯಕರ್ತರನ್ನು ಒಂದು ವರ್ಷ ಜೈಲಿಗೆ ಹಾಕಲಾಯಿತು ಆದರೆ ಕಾರ್ಕಳದಲ್ಲಿ ಐದು ಗೋವುಗಳ ಕಾಲುಗಳನ್ನು ಕತ್ತರಿಸಿ ಮಾರುತಿ ಕಾರಿನಲ್ಲಿ ತುಂಬಿಸಿಕೊಂಡು ಹೋದಾಗ ಯಾರನ್ನೂ ಕೂಡ ಶಿಕ್ಷೆಗೆ ಒಳಪಡಿಸಿಲ್ಲ. ಒಂದು ವರ್ಗದ ಜನರನ್ನು ಒಲೈಸುವ ಭರದಲ್ಲಿ ಹಿಂದು ಸಮುದಾಯದ ಜನರ ಭಾವನೆಗಳೊಂದಿಗೆ ಆಟವಾಡುವುದು ಯಾವ ನ್ಯಾಯ ಯಾಕೆ ಪೋಲಿಸರು ಅಥವ ಜಿಲ್ಲಾಡಳಿತ ಯಾವುದೇ ಕ್ರಮ ಅಂತಹವರ ವಿರುದ್ದ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಯೊಂದು ಜಿಲ್ಲೆಯ ಪ್ರಾಣಿ ಹಿಂಸೆ ತಡೆ ಮಂಡಳಿಯ ಮೂಲಕ ಗೋಹತ್ಯೆಯನ್ನು ತಡೆಯಲು ಮುಂದಾಗಬೇಕು ಈ ನಿಟ್ಟಿನಲ್ಲಿ ಸಂಬಧಪಟ್ಟ ಜಿಲ್ಲೆಯ ಅಧಿಕಾರಿಗಳು  ಕ್ರಮಕೈಗೊಳ್ಳಬೇಕು ಒಂದು ವೇಳೆ ಜಿಲ್ಲೆಯ ಅಧಿಕಾರಿಗಳು  ಇದರಲ್ಲಿ ವಿಫಲರಾದಲ್ಲಿ ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗುವುದು ಎಂದರು. ವಿಎಚ್‍ಪಿ ಸಂಘಟನೆ ಮುಂದಿನ ದಿನಗಳಲ್ಲಿ ಈ ಅಕ್ರಮ ಕಸಾಯಿಖಾನೆಗಳ ವಿಷಯವಾಗಿ ಹೋರಾಟ ನಡೆಸಲಿದೆ. ಕೋಣಗಳನ್ನು ಕಡಿಯುವುದಕ್ಕೆ ನಮ್ಮ ವಿರೋದವಿಲ್ಲ ಆದರೆ ಯಾವುದೇ ಕಾರಣಕ್ಕೂ ಹಸುಗಳನ್ನು ಕಡಿಯಬಾರದು ಎಂದರು.
ಅಲ್ಲದೆ ವಿಎಚ್‍ಪಿ ಸಂಘಟನೆ ಗೋಮಾಂಸ ರಫ್ತಿನ ವಿರುದ್ದವಾಗಿಲ್ಲ ಬದಲಾಗಿ ದೇವರು ಎಂದು ಪೂಜಿಸುವ ಗೋವುಗಳನ್ನು ಕಡಿಯಲು ಎಂದಿಗೂ ಬಿಡುವುದಿಲ್ಲ ಎಂದರು.

ವಿಎಚ್‍ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಗೋಪಾಲ್ ಕುತ್ತಾರ್, ಪ್ರದೀಪ್ ಪಂಪ್‍ವೆಲ್, ಉಮೇಶ್ ಜಪ್ಪಿನಮೊಗೆರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here